ಬೆಂಗಳೂರು, ಜ 27 (DaijiworldNews/HR): ತಜ್ಞರ ವರದಿ ಬಂದ ನಂತರ ಮುಂದಿನ ದಿನಗಳಲ್ಲಿ ಕೊರೊನಾ ನಿರ್ವಹಣೆ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೊರೊನಾ ನಿರ್ವಹಣೆ ಸಂಬಂಧ ಈಗಾಗಲೇ ಕೆಲವು ನಿರ್ಧಾರಗಳನ್ನು ಸಡಿಲಗೊಳಿಸಿದ್ದು, ಇನ್ನೂ ಕೆಲವು ನಿಯಮಗಳು ಮುಂದುವರಿದಿವೆ. ಸದ್ಯ ದಾಖಲಾಗುತ್ತಿರುವ ಪ್ರಕರಣಗಳನ್ನು ಗಮನಿಸಿ ಸರ್ಕಾರ ಏನೇನು ಕ್ರಮ ಕೈಗೊಳ್ಳಬೇಕು ಎಂಬುದರ ಸಲಹೆ ನೀಡುವಂತೆ ತಜ್ಞರ ಸಮಿತಿಯಲ್ಲಿ ವರದಿ ಕೇಳಲಾಗಿದೆ ಎಂದರು.
ಇನ್ನು ತಜ್ಞರು ವರದಿ ನೀಡಿದ ಬಳಿಕ ಸಭೆ ನಡೆಸಲಾಗುತ್ತಿದ್ದು, ಅಲ್ಲಿ ವಿಸ್ತೃತವಾಗಿ ಚರ್ಚಿಸಿ ಸರ್ಕಾರ ಮುಂದಿನ ಸೂಚನೆಗಳನ್ನು ನೀಡುತ್ತದೆ ಎಂದಿದ್ದಾರೆ.
ಇಂದು ಕ್ಯಾಬಿನೆಟ್ ಸಭೆ ಕರೆಯಲಾಗಿದ್ದು, ಅಜೆಂಡಾ ಪ್ರಕಾರವೇ ವಿಷಯಗಳು ಚರ್ಚೆಗೆ ಬರುತ್ತವೆ. ಕೊರೊನಾ ಉಸ್ತುವಾರಿ ಹೊಂದಿರುವ ಸಚಿವರುಗಳು ಈ ವಿಷಯ ಪ್ರಸ್ತಾಪಿಸಿದರೆ ಈ ಸಂಬಂಧವೂ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.