ಮೈಸೂರು, ಜ.27 (DaijiworldNews/KP): ಮೈಸೂರು ನಗರದ ಉದಯಗಿರಿ ಸಮೀಪದ ಸಾತಗಳ್ಳಿ ಲೇಔಟ್ನಲ್ಲಿ ಸಾಲಬಾಧೆ ತಾಳಲಾರದೆ ಪತಿ ಮತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರದಂದು ನಡೆದಿದೆ.
ಸಂತೋಷ್ (26) ಮತ್ತು ಅವರ ಪತ್ನಿ ಭವ್ಯಾ (22) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸಂತೋಷ್ ಉದ್ಯಮಿಯಾಗಿದ್ದು, ಕೆಲ ವರ್ಷಗಳಿಂದ ಉದ್ಯೋಗದಲ್ಲಿ ಸತತ ನಷ್ಟ ಅನುಭವಿಸಿ ಕೆಲವರ ಬಳಿ ಸಾಲ ಪಡೆದುಕೊಂಡು ಸಾಲದ ಸುಳಿಯಲ್ಲಿ ಸಿಲುಕಿದ್ದರು. ಹೆಚ್ಚುತ್ತಿರುವ ಸಾಲ ಮತ್ತು ಸಾಲಗಾರರನ್ನು ಎದುರಿಸಲಾಗದೆ ದಂಪತಿಗಳು ತಮ್ಮ ಉಟದಲ್ಲಿ ವಿಷ ಬೆರೆಸಿ ಸೇವಿಸಿದ್ದಾರೆ.
ಸ್ಥಳಕ್ಕೆ ಉದಯಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.