ಬೆಂಗಳೂರು, ಜ.27 (DaijiworldNews/KP): ಡಿ.ಕೆ.ಶಿವಕುಮಾರ್ ತಮಗಿಂತ ಮುಂದೆ ಹೋಗಿದ್ದಾರೆ ಎಂಬ ಅಭದ್ರತೆ ಸಿದ್ದರಾಮಯ್ಯ ಅವರನ್ನು ಕಾಡುತ್ತದೆ, ಹೀಗಾಗಿ ಅವರು ಸುಳ್ಳು ಹೇಳುತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿ ಮತ್ತು ಸಿದ್ಧರಾಮಯ್ಯನವರು ಪೈಪೋಟಿಯಿಂದ ಬಿಜೆಪಿಯ ಶಾಸಕರು ಅವರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ, ಸದ್ಯದಲ್ಲಿ ಕಾಂಗ್ರೆಸ್ಗೆ ಸೇರುತ್ತಾರೆ ಎಂದು ಹೇಳುತ್ತ ಬಂದಿದ್ದಾರೆಯೇ ಹೊರತು ಯಾವ ಶಾಸಕರು ಬರುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ ಎಂದರು.
ಇನ್ನು ಸಿದ್ದರಾಮಯ್ಯನಿಗೆ ರಾಜಕೀಯ ಅಭದ್ರತೆ ಎಲ್ಲೋ ಕಾಡುತ್ತಿದೆ, ಇವರ ಕಿತ್ತಾಟದಿಂದ ಮಂದಿನ ದಿನಗಳಲ್ಲಿ ಕಾಗ್ರೆಸ್ನವರೆ ಪಕ್ಷ ತೊರೆಯುತ್ತಾರೆಯೇ ಹೊರತು ಬಿಜೆಪಿಯವರು ಅಲ್ಲಿಗೆ ಹೋಗುವ ಮಾತೆ ಇಲ್ಲ ಎಂದರು.
ಬಿಜೆಪಿ ಸಂಪರ್ಕದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಎಲ್ಲಿಯೂ ಈ ರೀತಿ ಹೇಳಿಲ್ಲ. ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ, ಕಾಂಗ್ರೆಸ್ ನಾಯಕರ ಹಾಗೆ ಬೇಜವಾಬ್ದಾರಿಯಿಂದ ಮಾತನಾಡಲೂ ಸಿದ್ಧವಿಲ್ಲ ಎಂದರು.