ವಿಜಯನಗರ, ಜ 27 (DaijiworldNews/HR): ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಂಡಿದ್ದು, ಆ ಪಕ್ಷಕ್ಕೆ ಹೋದರೆ ಅವರ ಭವಿಷ್ಯ ಕತ್ತಲೆಗೆ ಹೋದಂತೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಮಾತಮಾಡಿದ ಅವರು, ಸದ್ಯದ ಕಾಂಗ್ರೆಸ್ನ ಪರಿಸ್ಥಿತಿ ಯಾವ ರೀತಿಯಲ್ಲಿ ಇದೆ ಎಂಬುದು ಇಡೀ ದೇಶದ ಜನರಿಗೆ ಗೊತ್ತಿದ್ದು, ಬಿಜೆಪಿ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ಅಂತಾ ಹೇಳುವ ದೊಡ್ಡ, ದೊಡ್ಡ ನಾಯಕರು ಯಾವ ಲೆಕ್ಕದ ಮೇಲೆ ಹೇಳ್ತಿದ್ದಾರೋ ಗೊತ್ತಿಲ್ಲಾ. ಅವರೆಲ್ಲ ದೊಡ್ಡ- ದೊಡ್ಡ ನಾಯಕರು ಅವರ ಬಗ್ಗೆ ನಾನು ಟೀಕೆ ಮಾಡಲ್ಲ ಎಂದಿದ್ದಾರೆ.
ಇನ್ನು "ತನ್ನ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಯಾರೂ ತಮ್ಮ ಭವಿಷ್ಯವನ್ನು ಕತ್ತಲೆಗೆ ದೂಡ್ತಾರೆ ಹೇಳಿ ನೋಡೋಣ, ಬಿಜೆಪಿ ಮುಂದೇನೂ ಬರ್ತದೆ, ಸುಮಾರು ವರ್ಷಗಳ ಕಾಲ ಆಳ್ವಿಕೆ ಮಾಡುತ್ತದೆ. 2023ರ ವಿಧನಾ ಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತದೆ" ಎಂದರು.