ಬೆಂಗಳೂರು, ಜ 26 (DaijiworldNews/HR): ಕಾಂಗ್ರೆಸ್ ಪಕ್ಷಕ್ಕೆ ಡಿಮ್ಯಾಂಡ್ ಕ್ರಿಯೇಟ್ ಮಾಡುವ ಉದ್ದೇಶದಿಂದ ಸಿದ್ದರಾಮಯ್ಯ ಮತ್ತು ಡಿಕೆಶಿ ಈ ರೀತಿಯ ಆಟ ಆಡುತ್ತಿದ್ದಾರೆ ಎಂದು ಚಿಕ್ಕಮಗಳೂರಿನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿ.
ಬಿಜೆಪಿ ಪಕ್ಷದಿಂದ ಕೆಲವು ಶಾಸಕರು ಹಾಗೂ ಸಂಸದರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಅವರ ಮಾತಿಗೆ ಪ್ರತಿಕ್ರೀಯೆ ನೀಡಿದ ಅವರು ನರೇಂದ್ರ ಮೋದಿಯಂತಹ ನಾಯಕರು ಕಾಂಗ್ರೆಸ್ನಲ್ಲಿ ಅಥವಾ ಜೆಡಿಎಸ್ ನಲ್ಲಿ ಸಿಗುತ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸಂಪರ್ಕದಲ್ಲಿ ಎಷ್ಟು ಜನ ಇದ್ದಾರೆ ಅನ್ನೋದನ್ನ ಹೇಳಲ್ಲ, ಹೆಸರನ್ನು ಹೇಳಲ್ಲ ಇಟ್ಕೋ ನಿನ್ನ ಹತ್ರನೇ, ನಮಗೇನಂತೆ ಒಬ್ಬ ಬಿಜೆಪಿ ಸಿಂಹದಮರಿ ಬರ್ತಾರೆ ಅಂತಾ ಅದ್ರೆ ಹೆಸರು ಹೇಳಲಿ ಎಂದು ಕಾಂಗ್ರೆಸ್ಗೆ ಸವಾಲು ಹಾಕಿದರು.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ಪಕ್ಷವನ್ನು ಸಾಯಿಸುತ್ತ ಬರುತಿದ್ದಾರೆ, ಇವರಿಬ್ಬರೂ ಸ್ವಾರ್ಥಿಗಳು ತಮ್ಮ ಸ್ವಾರ್ಥಕ್ಕಾಗಿ ಎನು ಬೇಕಾದರೂ ಹೇಳಿಕೆ ಕೊಡುತ್ತಾರೆ, ಪಾದಯಾತ್ರೆ ಮಾಡುತ್ತಾರೆ. ಇವರಿಗೆ ಜೆಡಿಎಸ್ನಲ್ಲಿ ಅವಕಾಶ ಸಿಕ್ಕಿಲ್ಲವೆಂದು ಪಕ್ಷವನ್ನೇ ಬಿಟ್ಟರು, ಇರೋಧ ಪಕ್ಷದ ನಾಯಕನ ಸ್ಥಾನ ಸಿಗುತ್ತದೆ ಅಂತಾ ಕಾಂಗ್ರೆಸ್ಗೆ ಬಂದರು ಅಂದಿನಿಂದ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸ್ಥಾನವನ್ನು ಅಂಲಕರಿಸುತ್ತಾ ಬಂದಿದ್ದಾರೆ, ಕಾಂಗ್ರೆಸ್ನಲ್ಲಿ ಇವರನ್ನು ಬಿಟ್ಟರೆ ಬೇರೆ ಯಾರೂ ನಾಯಕರೂ ಇಲ್ಲವೇ? ಎಂದು ಪ್ರಶ್ನಿಸಿದರು.
ಬಿಜೆಪಿಯಂತ ಒಳ್ಳೆಯ ಸೇಬು ಇರುವಾಗ ಕೊಳೆತ ಮಾವಿನ ಹಣ್ಣು ಯಾರಿಗೆ ಬೇಕು,ಬಿಜೆಪಿಯಲ್ಲಿ ಸೇಬಿನಂತಹ ನಾಯಕರು ಇರುವಾಗ ಈ ಪಕ್ಷ ಬಿಟ್ಟು ಯಾರೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದರು.