ಬೆಂಗಳೂರು, ಜ 26 (DaijiworldNews/KP): 2013ರಲ್ಲಿ ಬಿಜೆಪಿ ಸೋಲಿಗೆ ಸಿದ್ದರಾಮಯ್ಯ ಕಾರಣವಲ್ಲ ಬದಲಾಗಿ ಜೆಡಿಎಸ್ನ ಸತತ ಹೋರಾಟದಿಂದ ಬಿಜೆಪಿ ಸೋಲು ಅನುಭವಿಸಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ನಿಂದ ಕಾಂಗ್ರೆಸ್ ಪಕ್ಷಕ್ಕೆ ಶಾಸಕರು ಸೇರಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಆದರೆ ಯಾರು ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬ ಪಟ್ಟಿ ನನ್ನ ಬಳಿಯಿದೆ ಎಂದು ಕುಮಾರಸ್ವಾಮಿಯವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಪಕ್ಷದ ಕೆಲವು ಶಾಸಕರು ಸಿದ್ದರಾಮಯ್ಯನವರ ಶ್ರಮದಿಂದ ಅವರು ಗೆದ್ದಿದ್ದಾರೆ ಎನ್ನುತಿದ್ದಾರೆ. ಆದರೆ ಅವರು ಗೆದ್ದಿರುವುದರಿಂದ ಸಿದ್ದರಾಮಯ್ಯನ ಸಂರ್ಪಕದಲ್ಲಿ ಇದ್ದಾರೆ ಎನ್ನುವುದು ಅವರಿಗೆ ಇನ್ನು ತಿಳಿದಿಲ್ಲ, ಅವರ ಗೆಲುವಿಗಾಗಿ ನಾನು ಎಷ್ಟು ಕಷ್ಟ ಬಂದಿದ್ದೇನೆಂದು ನನಗೆ ಗೋತ್ತು ಎಂದು ಪರೋಕ್ಷವಾಗಿ ಶಿವಲಿಂಗೇಗೌಡರ ವಿರುದ್ದ ವಾಗ್ದಾಳಿ ನಡೆಸಿದರು.
ಇನ್ನು 2005ರಲ್ಲಿ ಪಾಂಚಜನ್ಯ ಮೊಳಗಿಸಿದ್ದರೂ ಕಾಂಗ್ರೆಸ್ ಸೋತಿತ್ತು, 2013ರಲ್ಲಿ ಬಿಜೆಪಿ ಸೋಲಿಗೆ ಸಿದ್ದರಾಮಯ್ಯ ಕಾರಣವಲ್ಲ, ಬದಲಾಗಿ ಜೆಡಿಎಸ್ನ ಸತತ ಹೋರಾಟದಿಂದ ಬಿಜೆಪಿ ಸೋಲು ಅನುಭವಿಸಿದೆ. 2018ರಲ್ಲಿ ಕಾಂಗ್ರೆಸ್ 78 ಸ್ಥಾನಗಳಿಗೆ ಕುಸಿದಿದ್ದು ಯಾಕೆ? ಎಂದು ಪ್ರಶ್ನಿಸಿದರು.
ಜೆಡಿಎಸ್ ಪಕ್ಷವನ್ನು ಬಿಟ್ಟು ನೀವು ಏನೂ ಮಾಡಲು ಆಗಲ್ಲ, ಅಧಿಕಾರದಲ್ಲಿ ಇದ್ದಾಗ ಒಂದು ನೀತಿ ಇಲ್ಲದಿರುವಾಗ ಇನ್ನೊಂದು ಅಲ್ಲ, ಸರ್ಕಾರಕ್ಕೆ ಪುಕ್ಸಟ್ಟೆ ಜಾಹೀರಾತು ನೀಡೋದೆ ಕೆಲಸ ಅಲ್ಲ, ರಾಜ್ಯ ನಡೆಸುವವರಿಗೆ ತಲೆ ಇರಬೇಕು ಇಲ್ಲಿ ಯಾರಿಗೂ ಯಾವ ಸಿದ್ದಾಂತದ ಅರಿವೇ ಇಲ್ಲ, ಇಲ್ಲಿ ಅಧಿಕಾರದ ಸಿದ್ದಾಂತವಷ್ಟೇ ಇದೆ. ಇನ್ನು 2023ರ ಚುನಾವಣೆಯಲ್ಲಿ ಜೆಡಿಎಸ್ನ ಸಾಧನೆ ಎಲ್ಲರಿಗೂ ತಿಳಿಯುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.