ಬೆಂಗಳೂರು, ಜ 26 (DaijiworldNews/KP): ನನ್ನ ಸರ್ಕಾರ ರೈತರ ಕೃಷಿ ಚಟುವಟಿಗೆಗೆ ಮತ್ತು ಸಮಾಜದ ದುರ್ಬಲ ವರ್ಗದ ಎಳಿಗೆಗಾಗಿ ಬಳಹಷ್ಟು ಒತ್ತು ನೀಡುತ್ತ ಬಂದಿದೆ ಎಂದು ರಾಜ್ಯಪಾಲ ತಾವರಚಂದ್ ಗೆಹ್ಲೋತ್ ಹೇಳಿದ್ದಾರೆ.
ಇಂದು 73ನೇ ಗಣರಾಜ್ಯೋತ್ಸದ ಪ್ರಯುಕ್ತ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಸರ್ಕಾರ ಸಮಾಜದ ದುರ್ಬಲ ವರ್ಗಗಳು ಅಂದರೆ ವಿಶೇಷವಾಗಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಗಳ ಜೀವನದ ಹಾಗೂ ಆರ್ಥಿಕತೆಯ ಹೆಚ್ಚಿಸಲು ಎಲ್ಲಾ ಹಂತಗಳಲ್ಲಿ ನ್ಯಾಯಬದ್ಧ ಕೆಲಸ ಮಾಡುತ್ತ ಬಂದಿದೆ. ಇನ್ನು ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಅತಿವೃಷ್ಟಿ, ಪ್ರವಾಹದ ಸಂದರ್ಭದಲ್ಲಿ ಸರ್ಕಾರ ಸಂತ್ರಸ್ತರ ನೆರವಿಗೆ ಧಾವಿಸಿದೆ. ಅಲ್ಲದೆ 2021-22ನೇ ಸಾಲಿನಲ್ಲಿ ಜಲಾನಯನ ಅಭಿವೃದ್ದಿ ಕಾಮಗಾರಿಗಳಿಗೆ 1,472 ಕೋಟಿ ರೂ. ಅನುಮೋದನೆ ನೀಡಲಾಗಿದೆ, ಪ್ರಸಕ್ತ ಸಾಲಿನಲ್ಲಿ 12.76. ಲಕ್ಷ ರೈತರು ಬೆಳೆ ಸಮೀಕ್ಷೆಯಡಿ ನೋಂದಾಯಿಸಿಕೊಂಡಿದ್ದಾರೆ ಎಂದರು.
ನಾವೀಗ ಕೊರೊನಾದ ಮೂರನೇ ಅಲೆಯನ್ನು ಎದುರಿಸುತ್ತಿದ್ದು. ಈ ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿ ನಿಭಾಯಿಸಬೇಕು ಹೊರತು ನಾವು ಈ ಕುರಿತು ನಿರ್ಲಕ್ಷ್ಯ ತೊರುವುದು ಸರಿಯಲ್ಲ, ಎಲ್ಲರ ಆರೋಗ್ಯದ ಹಿತಕ್ಕಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಪಾಡಬೇಕು ಮತ್ತು ಸ್ಯಾನಿಟೈಸರ್ ಬಳಕೆ ಮಾಡಬೇಕು. ನಾವು ಈ ಮೂರು ಮಂತ್ರಗಳನ್ನು ನಿರಂತರವಾಗಿ ಪಾಲಿಸಬೇಕು ಎಂದು ಅವರು ನಾಡಿನ ಜನರಿಗೆ ಕರೆ ನೀಡಿದರು.
ಸರ್ಕಾರವು ಕೊರೊನಾ ಸಂಕಷ್ಟದ ನಡುವೆಯು ರೈತರ ಮಕ್ಕಳ ಶಿಕ್ಷಣ ಪ್ರೋತ್ಸಾಹ ಯೋಜನೆಯಡಿ 4.41 ಕೋಟಿ ರೂ. ಮೊತ್ತವನ್ನು 16 ಸಾವಿರ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗಿದೆ ಎಂದರು.
ಇನ್ನು ರಾಜ್ಯವು 2023 ರ ಆಗಸ್ಟ್ 15 ರ ಅಮೃತ ಮಹೋತ್ಸವ ಅನುಷ್ಠಾನಕ್ಕೆ ಮಾರ್ಗಸೂಚಿ ಸಿದ್ದಪಡಿಸಿಕೊಂಡಿದ್ದು. ಹಾಲು ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಇಡೀ ದೇಶದಲ್ಲಿ 2ನೇ ಸ್ಥಾನ, ಮೊಟ್ಟೆ ಉತ್ಪಾದನೆಯಲ್ಲಿ 6ನೇ ಸ್ಥಾನ, ಮಾಂಸ ಉತ್ಪಾದನೆಯಲ್ಲಿ 10ನೇ ಸ್ಥಾನ ಪಡೆದುಕೊಂಡಿದ್ದು. ಅಲ್ಲದೆ ಅತ್ಯಧಿಕ ಹುಲಿಗಳನ್ನು ಹೊಂದಿರುವ ದೇಶದ 2ನೇ ರಾಜ್ಯ, ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಗೆ ನಮ್ಮದಾಗಿದೆ ಎಂದರು.