ಕಾರವಾರ,ಜ 26 (DaijiworldNews/KP): ಕಾಂಗ್ರೆಸ್ ಪಕ್ಷದವರು ಬೇರೆ ಪಕ್ಷಕ್ಕೆ ಬರುವವರನ್ನು ಮೊದಲು ತಡೆಯಬೇಕು, ನಂತರ ಬೇರೆ ಪಕ್ಷದ ಬಗ್ಗೆ ಗಮನ ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಇಂದು ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲು ಮಂಗಳವಾರ ರಾತ್ರಿ ನಗರಕ್ಕೆ ಬಂದು ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರು ಕೂಡ ಅವರದೇ ಆದ ಆಡಳಿತಾತ್ಮಕ ಹಲವಾರು ಸಮಸ್ಯೆಗಳಿರುತ್ತದೆ. ರಾಜಕೀಯದಲ್ಲಿ ಯಾರು ಸನ್ಯಾಸಿಗಳಲ್ಲ ಎಂದು ಹೇಳಿದರು
ಯಾರು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ ಎಂಬುದು ಕಾಂಗ್ರೆಸ್ನವರಿಗೆ ತಿಳಿದಿಲ್ಲ, ಅವರ ಊಹೆಯಂತೆ ಅವರು ಹೇಳುತ್ತಿದ್ದಾರೆ ಅಷ್ಟೇ ಇದೆಲ್ಲವೂ ಠುಸ್ ಪಟಾಕಿ ಎಂದರು.
ಇನ್ನು ಬಿಜೆಪಿ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿಯ ಶಾಸಕರು, ಸಚಿವರು ಅವರ ಅಭಿಪ್ರಾಯ ಹೇಳಿದ್ದಾರೆ, ನಮ್ಮಲ್ಲಿ ಅಭಿಪ್ರಾಯದ ಭೇದವಿಲ್ಲ. ಹೈಕಮಾಂಡ್ ಸೂಚನೆಯಂತೆ ಪಕ್ಷ ತೀರ್ಮಾನ ತೆಗೆದುಕೊಂಡಿದೆ, ಅಂತಿಮವಾಗಿ ಎಲ್ಲವು ಸುಖಾಂತ್ಯ ಕಾಣಲಿದೆ. ರಾಜಕೀಯ ಎಂದರೆ ಅದರಲ್ಲಿ ಗುಡುಗು, ಸಿಡಿಲು ಇಲ್ಲವೂ ಇರುತ್ತದೆ ಕೊನೆಯಲ್ಲಿ ತಂಪಾದ ಮಳೆ ಬಂದು ಭೂಮಿ ತಣ್ಣಗಾಗುತ್ತದೆ ಎಂದು ಹೇಳಿದರು.