ನವದೆಹಲಿ, ಜ 26 (DaijiworldNews/HR): ಭಾರತದಲ್ಲಿ ಇಂದು 79ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ರಾಜಧಾನಿ ನವದೆಹಲಿಯಲ್ಲಿ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.
ಪೊಲೀಸರು ಹೆಚ್ಚಿನ ತಪಾಸಣೆ ನಡೆಸುತ್ತಿದ್ದು, ದೆಹಲಿ-ನೋಯ್ಡಾ ಗಡಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ವಾಹನಗಳನ್ನು ಪರಿಶೀಲನೆ ನಡೆಸಿ ಬಿಡಲಾಗುತ್ತಿದೆ.
ಕೊರೊನಾದಿಂದಾಗಿ ತಪಾಸಣೆ ಮತ್ತು ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಹೋರಾಟದಲ್ಲಿ ಮಡಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವ ಹಿನ್ನೆಲೆಯಲ್ಲಿ ರಾಜಪಥದ ಪಥ ಸಂಚನಕ್ಕೆ10.30ಕ್ಕೆ ಆರಂಭವಾಗಲಿದೆ.
ಇನ್ನು ಸಮಾರಂಭದ ಮೇಲೆ ಹದ್ದಿನ ಕಣ್ಣಿಡಲು ರಾಜಪಥದ ಸುತ್ತ 500 ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿದ್ದು, ದೆಹಲಿ ಪೊಲೀಸರ 30 ಸಾವಿರ ಸಿಬ್ಬಂದಿ, 65 ಪ್ಯಾರಾ ಮಿಲಿಟರಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.