ಬೆಂಗಳೂರು, ಜ 24 (DaijiworldNews/MS): ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಹೊರಡಿಸಲಾಗಿದ್ದ ಆದೇಶವನ್ನು ಮಾರ್ಪಡಿಸಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮತ್ತು ಸಚಿವರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ, ಕರ್ನಾಟಕ ಸರ್ಕಾರದ ಸಚಿವಾಲಯ ಆದೇಶ ಹೊರಡಿಸಿದೆ.
ಈ ಪೈಕಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಜಿಲ್ಲೆಗೆ ಸಚಿವ ಸುನೀಲ್ ಕುಮಾರ್, ಉಡುಪಿ ಜಿಲ್ಲೆಗೆ ಎಸ್. ಅಂಗಾರ ಕೋಟಾ ಶ್ರೀನಿವಾಸ ಪೂಜಾರಿ ಅವರು ಉತ್ತರ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ.
ಬಸವರಾಜ ಬೊಮ್ಮಾಯಿ -ಬೆಂಗಳೂರು ನಗರ ಜಿಲ್ಲೆ
ಗೋವಿಂದ ಎಂ ಕಾರಜೋಳ - ಬೆಳಗಾವಿ
ಕೆ ಎಸ್ ಈಶ್ವರಪ್ಪ - ಚಿಕ್ಕಮಗಳೂರು
ಬಿ ಶ್ರೀರಾಮುಲು - ಬಳ್ಳಾರಿ
ವಿ.ಸೋಮಣ್ಣ - ಚಾಮರಾಜನಗರ
ಉಮೇಶ್ ಕತ್ತಿ - ವಿಜಯಪುರ
ಎಸ್ ಅಂಗಾರ - ಉಡುಪಿ
ಅರಗ ಜ್ಞಾನೇಂದ್ರ - ತುಮಕೂರು
ಡಾ.ಸಿ.ಎನ್.ಅಶ್ವತ್ಥನಾರಾಯಣ - ರಾಮನಗರ
ಸಿ.ಸಿ.ಪಾಟೀಲ್ - ಬಾಗಲಕೋಟೆ
ಆನಂದ್ ಸಿಂಗ್ - ಕೊಪ್ಪಳ
ಕೋಟಾ ಶ್ರೀನಿವಾಸಪೂಜಾರಿ - ಉತ್ತರ ಕನ್ನಡ
ಪ್ರಭು ಚೌವ್ಹಾಣ್ - ಯಾದಗಿರಿ
ಮುರುಗೇಶ್ ನಿರಾಣಿ - ಕಲಬುರ್ಗಿ
ಶಿವರಾಂ ಹೆಬ್ಬಾರ್ - ಹಾವೇರಿ
ಎಸ್ ಟಿ ಸೋಮಶೇಖರ್ - ಮೈಸೂರು
ಬಿ.ಸಿ.ಪಾಟೀಲ್ - ಚಿತ್ರದುರ್ಗ ಮತ್ತು ಗದಗ
ಬಿ.ಎ.ಬಸವರಾಜ್ - ದಾವಣಗೆರೆ
ಡಾ.ಕೆ.ಸುಧಾಕರ್ - ಬೆಂಗಳೂರು ಗ್ರಾಮಾಂತರ
ಕೆ.ಗೋಪಾಲಯ್ಯ - ಹಾಸನ ಮತ್ತು ಮಂಡ್ಯ
ಶಶಿಕಲಾ ಜೊಲ್ಲೆ - ವಿಜಯನಗರ
ಎಂಟಿಬಿ ನಾಗಾರಾಜ್ - ಚಿಕ್ಕಬಳ್ಳಾಪುರ
ಕೆ ಸಿ ನಾರಾಯಣಗೌಡ - ಶಿವಮೊಗ್ಗ
ಬಿ.ಸಿ.ನಾಗೇಶ್ - ಕೊಡಗು
ವಿ.ಸುನೀಲ್ ಕುಮಾರ್ - ದಕ್ಷಿಣ ಕನ್ನಡ
ಹಾಲಪ್ಪ ಆಚಾರ್ - ಧಾರವಾಡ
ಶಂಕರ್ ಬಿ ಪಾಟೀಲ್ ಮುನೇನಕೊಪ್ಪ - ರಾಯಚೂರು ಮತ್ತು ಬೀದರ್
ಮುನಿರತ್ನ - ಕೋಲಾರ