ಚಿತ್ರದುರ್ಗ ಜ 24 (DaijiworldNews/KP): ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ಸೊಸೆಯಿಂದಲೇ ರಾತ್ರಿ ಮಲಗಿದ್ದ ವೇಳೆ ಅತ್ತೆಯನ್ನು ಹತ್ಯೆ ಮಾಡಿದ ಭೀಕರ ಘಟನೆ ನಡೆದಿದೆ.
ರುದ್ರಮ್ಮ (60) ಕೊಲೆಯಾದ ದುರ್ದೈವಿ. ಸೊಸೆ ಮುದ್ದಕ್ಕ (38) ಮತ್ತು ಅತ್ತೆ ರುದ್ರಮ್ಮ ನಡುವೆ ಹೊಂದಾಣಿಕೆ ಇಲ್ಲದೆ ಪ್ರತಿದಿನ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದ್ದು. ಅತ್ತೆಯ ಮೇಲಿನ ದ್ವೇಷದಿಂದ ಸೊಸೆ ರಾತ್ರಿ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಸುತ್ತಿಗೆಯಿಂದ ಅತ್ತೆಯ ತಲೆಗೆ ಜಜ್ಜಿ ಕೊಲೆ ಮಾಡಲಾಗಿದೆ.
ಆರೋಪಿ ಮುದ್ದಕ್ಕ ಸ್ವತಃ ಅತ್ತೆಯನ್ನೇ ಕೊಲೆ ಮಾಡಿರುವ ಬಗ್ಗೆ ಮಾಹಿತಿ ಪಡೆದ ಚಳ್ಳಕೆರೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.