ನವದೆಹಲಿ, ಜ 23 (DaijiworldNews/KP): ಹಲವು ಜನಪ್ರತಿನಿಧಿಗಳಿಗೆ ಕಾಡಿದ್ದ ಕೊರೊನಾ ಇದೀಗ ಉಪ ರಾಷ್ಟ್ರವತಿ ಎಂ.ವೆಂಕಯ್ಯ ನಾಯ್ಡು ಅವರಿಗೂ ಭಾನುವಾರ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.
ಈ ಕುರಿತು ಟ್ವೀಟ್ ಮಾಡಿದ ಉಪರಾಷ್ಟ್ರಪತಿಯ ಕಾರ್ಯಾಲಯವು, ವೆಂಕಯ್ಯ ನಾಯ್ಡು ಅವರಿಗೆ ಭಾನುವಾರ ಕೊರೊನಾ ಪಾಸಿಟಿವ್ ಆಗಿದ್ದು, ಒಂದು ವಾರದವರೆಗೆ ಅವರು ಸ್ವಯಂ-ಪ್ರತ್ಯೇಕತೆಯಲ್ಲಿ ಇರಲಿದ್ದಾರೆ ಎಂದು ತಿಳಿಸಿದೆ
ಅವರ ಸಂಪರ್ಕಕ್ಕೆ ಬಂದವರು ಸ್ವಯಂ ಕೊರೊನಾ ಪರೀಕ್ಷೆಗೆ ಒಳಪಡಬೇಕೆಂದು ಮನವಿ ಮಾಡಿದೆ.