ಬೆಂಗಳೂರು, ಜ 23 (DaijiworldNews/HR): ಕರ್ನಾಟಕದಲ್ಲಿ ಇಂದು ಒಮೈಕ್ರಾನ್ ಸ್ಪೋಟಗೊಂಡಿದ್ದು, 165 ಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕರ್ನಾಟಕದಲ್ಲಿ ಇಂದು ಒಮೈಕ್ರಾನ್ ಸ್ಪೋಟಗೊಂಡಿದ್ದು, ಅದರಲ್ಲಿ 165 ಪ್ರಕರಣಗಳು ಕೂಡ ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಒಟ್ಟು ಒಮೈಕ್ರಾನ್ ಸೋಂಕಿತರ ಸಂಖ್ಯೆ 931ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ರಾಜ್ಯದಲ್ಲಿ ನೆನ್ನೆ ಒಂದೇ ದಿನ 42,470 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ರಾಜ್ಯದೆಲ್ಲೆಡೆ 2.18ಲಕ್ಷಕ್ಕು ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ಪಾಸಿಟಿವಿಟಿ ರೇಟ್ 19.33% ಇದೆ.