ಚಂಡೀಗಢ, ಜ 23 (DaijiworldNews/KP): ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧುರ ಸಲಹೆಗಾರ, ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಅವರು ಮುಸ್ಲಿಮರನ್ನುದ್ದೇಶಿಸಿ ಭಾಷಣ ಮಾಡಿದ ಆರೋಪದಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧುರ ಸಲಹೆಗಾರ, ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಕೆಲ ದಿನಗಳ ಹಿಂದೆ ಭಾಷಣ ಮಾಡುವಾಗ ಒಂದು ಸಮುದಾಯದ ವಿರುದ್ಧವಾಗಿ ಮಾತನಾಡಿದ್ದಾರೆ ಎಂದು ಪೊಲೀಸರು ಆತನ ಮೇಲೆ ಐಪಿಸಿ ಸೆಕ್ಷನ್ 153-ಎ ದಾಖಲಿಸಿದ್ದಾರೆ.
ಎಫ್ಐಆರ್ ಬಗ್ಗೆ ಪ್ರತಿಕ್ರಿಯಿಸಿದ ಮೊಹಮ್ಮದ್ ಮುಸ್ತಫಾ, ಈ ಎಫ್ಐಆರ್ ಅಸಂಬದ್ಧ. ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸುತ್ತಿರುವಂತೆ ನಾನು ಹಿಂದೂಗಳನ್ನು ಗುರಿಯಾಗಿಸಿಕೊಂಡು ಮಾತನಾಡಿಲ್ಲ. ಭಾಷಣದಲ್ಲಿ ನಾನು 'ಫಿಟ್ನೆ' ಪದವನ್ನು ಬಳಸಿದ್ದೆ, ಆದರೆ ಆ ಪದವೆ ಈಗ ಕಾನೂನು ಉಲ್ಲಂಘಿಸುವವರು ಎಂದು ಹೇಳಲಾಗಿದೆ. ಇನ್ನು ನನ್ನ ಮೇಲೆ ಹಲ್ಲೆಗೆ ಯತ್ನಿಸಿದ ಮುಸ್ಲಿಮರ ಗುಂಪಿನ ಮೇಲೆ ನಾನು ಕೋಪಗೊಂಡಿದ್ದೇನೆ. ನಾನು ಅವರಿಗೆ ಎಚ್ಚರಿಕೆ ನೀಡಿದ್ದೇನೆಯೇ ಹೊರತು ಹಿಂದೂಗಳಿಗೆ ಅಲ್ಲ, ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಮಲೇರ್ಕೋಟ್ಲಾದಲ್ಲಿ ಮುಸ್ಲಿಮರನ್ನುದ್ದೇಶಿಸಿ ಮಾಡಿದ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ನಗರ ಎಸ್ಎಚ್ಒ ಮಲೇರ್ಕೋಟ್ಲಾ ಇನ್ಸ್ಪೆಕ್ಟರ್ ಕರಮ್ವೀರ್ ಸಿಂಗ್ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದು. ಚುನಾವಣಾ ಆಯೋಗದ ಆದೇಶದ ಮೇರೆಗೆ ದಾಖಲಾದ ಪ್ರಕರಣದಲ್ಲಿ ಎಫ್ಐಆರ್ನಲ್ಲಿ ಉಲ್ಲೇಖ ಮಾಡಿಲ್ಲ. ಆದರೆ ಚುನಾವಣಾ ಆಯೋಗವು ಈ ವಿಡಿಯೋವನ್ನು ಪರಿಶೀಲಿಸಿ ಮೊಹಮ್ಮದ್ ಮುಸ್ತಫಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದೆ.