ಮುಂಬೈ, ಜ 23 (DaijiworldNews/KP): ಕ್ಯಾಟರಿಂಗ್ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಮಹಿಳೆಯೊಬ್ಬರಿಗೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ಇವರಲ್ಲಿ ಇಬ್ಬರು ಹದಿಹರೆಯದವರನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಒಬ್ಬ ಆರೋಪಿ ಸಂತ್ರಸ್ತೆಯ ಪರಿಚಿತನಾಗಿದ್ದು, ಕೆಲಸ ಮುಗಿಸಿ ಮಹಿಳೆ ಮನೆಗೆ ಹಿಂದಿರುಗುತ್ತಿದ್ದ ಆಕೆಯನ್ನು ತಡೆದು ಯಾಕೆ ತಡವಾಗಿ ಹೋಗಿತ್ತಿದ್ದಿ ಎಂದು ಕೇಳಿದ್ದಾನೆ. ಅವರಲ್ಲಿ ಇನ್ನೊಬ್ಬ ಆಕೆಯನ್ನು ತನ್ನ ಜೊತೆ ಬರ ಹೇಳಿ ಅವಳನ್ನು ಕೋಣೆಗೆ ಕರೆದೊಯ್ದು ಆರೋಪಿಗಳು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದರು. ಆಕೆ ಅದನ್ನು ವಿರೋದಿಸಿ ಬೊಬ್ಬೆ ಹಾಕಿದಾಗ ಎಲ್ಲರೂ ಸೇರಿ, ಆಕೆಯ ಬಾಯಿ ಮುಚ್ಚಿ ನಂತರ ಅವಳ ಮೇಲೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇನ್ನು ಸಂತ್ರಸ್ತೆ ಪೊಲೀಸರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ ಕೂಡಲೇ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದು, ಪೊಲೀಸರು ಐಪಿಸಿ ಸೆಕ್ಷನ್ 376 ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದು. ಶನಿವಾರ ಮಧ್ಯಾಹ್ನ ರೈಲಿನಲ್ಲಿ ಉತ್ತರ ಪ್ರದೇಶದ ಬಸ್ತಿಗೆ ಪಲಾಯನ ಮಾಡಲು ಯತ್ನಿಸಿದ ಇಬ್ಬರು ಅಪ್ರಾಪ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಅಪ್ರಾಪ್ತ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಯುತ್ತಿದ್ದಾರೆ.