ಕೋಲ್ಕತಾ, ಜ 23 (DaijiworldNews/KP): ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ದೇಶ ನಾಯಕ್ ದಿವಸ್ವೆಂದು ಅರ್ಥಪೂರ್ಣವಾಗಿ ಆಚರಿಸಲು ರಾಷ್ಟ್ರೀಯ ರಜಾದಿನವಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿರವರು ಭಾನುವಾರ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು ಪಶ್ಚಿಮ ಬಂಗಾಳ ಸರ್ಕಾರವು ನೇತಾಜಿಯವರ ಜನ್ಮದಿನವನ್ನು ದೇಶ್ ನಾಯಕ್ ದಿನವೆಂದು ಆಚರಿಸುತ್ತದೆ. ನೇತಾಜಿಯವರು ದೇಶಭಕ್ತಿ, ಧೈರ್ಯ, ನಾಯಕತ್ವ, ಏಕತೆ ಮತ್ತು ಭ್ರಾತೃತ್ವದ ದ್ಯೋತಕರಾಗಿದ್ದಾರೆ. ಮುಂದಿನ ಪೀಳಿಗೆಗೆ ಕೂಡ ನೇತಾಜಿ ಸ್ಫೂರ್ತಿಯಾಗಿದ್ದು, ಅವರ ಜನ್ಮದಿನವನ್ನು ದೇಶ್ ನಾಯಕ್ದಿನವೆಂದು ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ಈ ಮನವಿಯನ್ನು ಕೇಂದ್ರ ಸರ್ಕಾರ ಅಂಗಿಕರಿಸಿದ್ದೇ ಆದರೆ, ಇಡೀ ದೇಶವು ಮಹಾನ್ ರಾಷ್ಟ್ರೀಯ ನಾಯಕನಿಗೆ ಗೌರವ ಸಲ್ಲಿಸಲು ಮತ್ತು ದೇಶ ನಾಯಕ್ ದಿವಸ್ ಅನ್ನು ಅತ್ಯಂತ ಅರ್ಥಪೂಣವಾಗಿ ಆಚರಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ದೇಶದ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ. ಆದರೆ ನಾನು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ನೇತಾಜಿ ಅವರ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಿ. ಇಡೀ ರಾಷ್ಟ್ರವು ರಾಷ್ಟ್ರೀಯ ನಾಯಕನಿಗೆ ಗೌರವ ಸಲ್ಲಿಸಿ, ಅವರ ಆದರ್ಶವನ್ನು ಮೈಗೂಡಿಸಿಕೊಂಡು ಮತ್ತು ದೇಶ್ ನಾಯಕ್ ದಿನವನ್ನು ಅತ್ಯಂತ ಸೂಕ್ತವಾದ ರೀತಿಯಲ್ಲಿ ಆಚರಿಸಲು ಇದು ಅವಕಾಶ ಮಾಡಿಕೊಡುತ್ತದೆ ಎಂದರು.