ಲಖನೌ,ಜ 23 (DaijiworldNews/KP): ಭಾರತದ ಅತ್ಯಂತ ಎತ್ತರ ವ್ಯಕ್ತಿ ಎನಿಸಿಕೊಂಡಿರುವ ಧರ್ಮೇಂದ್ರ ಪ್ರತಾಪ್ ಸಿಂಗ್ ಅವರು ಸಮಾಜವಾದಿ ಪಕ್ಷ ಸೇರ್ಪಡೆಯಾದ ಬಗ್ಗೆ ಪಕ್ಷದ ಅಧ್ಯಕ್ಷ ನರೇಶ್ ಉತ್ತಮ್ ಪಟೇಲ್ ದೃಢಪಡಿಸಿದ್ದಾರೆ.
ಉತ್ತರ ಪ್ರದೇಶದ ಪ್ರತಾಪಗಡ ಜಿಲ್ಲೆಯ ನರ್ಹಾರ್ಪುರ ಕಸಿಯಹಿ ಗ್ರಾಮದ 46 ವರ್ಷದ ಧರ್ಮೇಂದ್ರ, 2.4 ಮೀಟರ್ (8.1 ಅಡಿ) ಎತ್ತರ ಇದ್ದಾರೆ. ವಿಶ್ವ ದಾಖಲೆ ನಿರ್ಮಿಸುವ ಅವಕಾಶವನ್ನು ಕೇವಲ 11 ಸೆಂಟಿ ಮೀಟರ್ ಅಂತರದಿಂದ ತಪ್ಪಿಹೊಗಿದ್ದು. ಸದ್ಯ ಇವರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು. ಇವರ ಸೇರ್ಪಡೆಯಿಂದ ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ನಮ್ಮ ಪಕ್ಷವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಸಮಾಜವಾದಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ನೀತಿಗಳು, ಕಾರ್ಯವೈಖರಿ ಮತ್ತು ಅಖಿಲೇಶ್ ಯಾದವ್ರ ನಾಯಕತ್ವದಲ್ಲಿ ನಂಬಿಕೆ ಇಟ್ಟು ಧರ್ಮೇಂದ್ರ ಅವರು ಇಂದು ಸಮಾಜವಾದಿ ಪಕ್ಷ ಸೇರಿಕೊಂಡಿದ್ದು. ಧರ್ಮೇಂದ್ರ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಂದರ್ಭದಲ್ಲಿ ನರೇಶ್ ಉತ್ತಮ್ ಪಟೇಲ್ ಅವರು, ಇವರ ಆಗಮನದಿಂದ ಪಕ್ಷವನ್ನು ಬಲಪಡಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಧರ್ಮೇಂದ್ರರವರು ತಮ್ಮ ಎತ್ತರದಿಂದ ಬಹಳ ಜನಪ್ರಿಯರಾಗಿದ್ದು ಮನೆಯಿಂದ ಹೊರ ಬಂದಾಗೆಲ್ಲ ಜನರು ಅವರನ್ನು ಮುತ್ತಿಕೊಂಡು ಫೋಟೊ ತೆಗೆಸಿಕೊಳ್ಳುತ್ತಿದ್ದು, ಹಾಗಾಗಿ ಇವರು ಸೆಲೆಬ್ರಿಟಿ ಪ್ರಚಾರಕರಾಗಲಿದ್ದರೆ ಎಂಬ ಕುತೂಹಲ ಭಾಸವಾಗಿದೆ.