ನವದೆಹಲಿ, ಜ 23 (DaijiworldNews/KP): ಸ್ಮಾರಕದ ಮೂಲಕ ಪ್ರತಿಯೊಬ್ಬ ಭಾರತೀಯ ಕೂಡ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರು ದೇಶಕ್ಕಾಗಿ ನೀಡಿರುವ ಕೊಡುಗೆ ಬಗ್ಗೆ ಹೆಮ್ಮೆಪಡುತ್ತಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸುಭಾಸ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಟ್ವೀಟ್ ಮಾಡಿರುವ ಅವರು, ಚಂದ್ರ ಬೋಸ್ ಅವರ 125 ನೇ ಜನ್ಮ ವಾರ್ಷಿಕೋತ್ಸವದಂದು ಗೌರವಾನ್ವಿತ ನಮನಗಳನ್ನು ಸಲ್ಲಿಸುತ್ತಿದ್ದೇನೆ. ಸ್ಮಾರಕದ ಮೂಲಕ ಪ್ರತಿಯೊಬ್ಬ ಭಾರತಿಯನೂ ನೇತಾಜಿ ದೇಶದ ಸ್ವಾತಂತ್ರ್ಯಕಾಗಿ ಮಾಡಿರುವ ಸಹಾಸ, ಕೊಡುಗೆ ಬಗ್ಗೆ ಹೆಮ್ಮೆ ಪಡುತ್ತಾನೆ ಎಂದಿದ್ದಾರೆ.
1987 ಜನವರಿ 23ರಂದು ಒಡಿಶಾದ ಕಟಕ್ ನಗರದಲ್ಲಿ ಜಾನಕಿನಾಥ್ ಬೋಸ್ ಮತ್ತು ಪ್ರಭಾವತಿ ದೇವಿ ದಂಪತಿ ಪುತ್ರನಾಗಿ ಜನಿಸಿದ ನೇತಾಜಿ ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರೂ, ಇವರ ಜನ್ಮದಿನಾಚರಣೆಯನ್ನು ಪರಾಕ್ರಮ ದಿನವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದ್ದು.
ಇನ್ನು ಇಂದು ಪ್ರಧಾನಿ ಮೋದಿಯವರು ಇಂಡಿಯಾ ಗೇಟ್ನ ಬಳಿಯಿದ್ದ ಅಮರ ಜವಾನ್ ಜ್ಯೋತಿ ಇದ್ದ ಜಾಗದ ಮೇಲ್ಛಾವಣಿ ಮೇಲೆ ಗ್ರಾನೈಟ್ನಿಂದ ನಿರ್ಮಿಸಲಾದ ಅವರ ಬಹುದೊಡ್ಡ ನೇತಾಜಿ ಸುಭಾಷ್ ಚಂದ್ರ ಬೋಸ್ರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.