ಲಖನೌ, ಜ 23 (DaijiworldNews/HR): ಬಾಬು ಸಿಂಗ್ ಕುಶ್ವಾಹಾ ಮತ್ತು ಭಾರತ್ ಮುಕ್ತಿ ಮೋರ್ಚಾದೊಂದಿಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಉತ್ತರ ಪ್ರದೇಶದಲ್ಲಿ ತಮ್ಮ ಮೈತ್ರಿಯನ್ನು ಘೋಷಿಸಿದ್ದು, ಉತ್ತರ ಪ್ರದೇಶದಲ್ಲಿ ತಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಒಬ್ಬರು ಒಬಿಸಿ ಸಮುದಾಯದವರು ಮತ್ತು ಇನ್ನೊಬ್ಬರು ದಲಿತ ಸಮುದಾಯದವರು ಸಿಎಂ ಆಗುತ್ತಾರೆ. ಮುಸ್ಲಿಂ ಸಮುದಾಯದವರು ಸೇರಿದಂತೆ 3 ಉಪಮುಖ್ಯಮಂತ್ರಿಗಳು ಇರುತ್ತಾರೆ ಎಂದು ಹೇಳಿದ್ದಾರೆ.
ಇದು ಬಲವಂತದಿಂದ ರಚನೆಯಾದ ಮೈತ್ರಿಯೇ ಎಂಬ ಮಾಧ್ಯಮದವರ ಪ್ರಶ್ನಿಗೆ ಉತ್ತರಿಸಿದ ಬಾಬು ಸಿಂಗ್ ಕುಶ್ವಾಹಾ, ಇದು ಬಲವಂತದ ಮೈತ್ರಿ ಅಲ್ಲ. ನಾವು ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕಾಗಿ ದೀರ್ಘಕಾಲ ಕೆಲಸ ಮಾಡಿದ್ದೇವೆ ಎಂದರು
ಇನ್ನು ಫೆಬ್ರವರಿ 10 ರಿಂದ ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.