ಬೀದರ್, ಜ 23 (DaijiworldNews/HR): ರಾಜ್ಯ ಸರ್ಕಾರದ ದೊಡ್ಡ ಸಾಧನೆಯೆಂದರೆ ಸುಳ್ಳು ಸುದ್ದಿ ಹಬ್ಬಿ ಜನರ ದಾರಿ ತಪ್ಪಿಸುವುದಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಮಿತಿಯಲ್ಲಿ ಯೋಜನೆಗಳಿಗೆ ಅನುಮೋದನೆ ದೊರೆತರೆ ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ಇದೆ. ಆದರೆ ಬಿಜೆಪಿ ಸರ್ಕಾರ ಮಂಡಳಿಗೆ ನಾಮನಿರ್ದೇಶನ ಮಾಡದೇ ಮೊದಲು ಹಣ ಬಳಸಿ ಎಂದು ಸೂಚಿಸುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ" ಎಂದು ಆರೋಪಿದ್ದಾರೆ.
ಇನ್ನು "ಹೊಸ ಸರ್ಕಾರ ಬಂದು 30 ತಿಂಗಳು ಕಳೆದರೂ ಅಭಿವೃದ್ಧಿ ಮಂಡಳಿ ಸಮಿತಿ ರಚನೆಯಾಗಿಲ್ಲ. ಮಂಡಳಿಗೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ಒಬ್ಬ ಸಚಿವರನ್ನು ಉಸ್ತುವಾರಿಯಾಗಿ ನೇಮಿಸಬೇಕು. 8 ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ತಲಾ ಒಬ್ಬರು ಸಂಸದ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ನಗರಸಭೆ ಅಧ್ಯಕ್ಷ, ಐವರು ತಜ್ಞರನ್ನು ನೇಮಕ ಮಾಡಬೇಕು. ಆದರೆ, ಸಮಿತಿಯನ್ನೇ ರಚಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.