ನವದೆಹಲಿ, ಜ 22(DaijiworldNews/MS): ಗೋವಾದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾಪದೊಂದಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೋನಿಯಾ ಗಾಂಧಿ ಅವರನ್ನು ಸಂಪರ್ಕಿಸಿದ್ದರು ಟಿಎಂಸಿ ಹೇಳಿದೆ.
ಆದರೆ ಮಮತಾ ಬ್ಯಾನರ್ಜಿ ಅವರ ಮೈತ್ರಿ ಪ್ರಸ್ತಾವನೆಗೆ ಸೋನಿಯಾ ಗಾಂಧಿ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ ಎಂದು ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷ ಪವನ್ ಕೆ ವರ್ಮ ತಿಳಿಸಿದ್ದಾರೆ.
"ಕೆಲವು ವಾರಗಳ ಹಿಂದೆ ಸ್ವತಃ ಮಮತಾ ಬ್ಯಾನರ್ಜಿ ಅವರು ಸೋನಿಯಾ ಗಾಂಧಿ ಅವರನ್ನು ಸಂಪರ್ಕಿಸಿದ್ದರು. ಈ ಹಿಂದೆದೆ ಏನಾಯಿತು ಎಂಬುದನ್ನು ಬಿಟ್ಟು 2022 ರಲ್ಲಿ ಹೊಸ ಆರಂಭವನ್ನು ಎದುರು ನೋಡೋಣ ಎಂದು ಹೇಳಿದ್ದರು. ಸೋನಿಯಾ ಜಿ ಅವರು ತಮ್ಮ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ ನಂತರ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ಕಾಂಗ್ರೆಸ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ" ಎಂದು ವರ್ಮಾ ಹೇಳಿದ್ದಾರೆ
ಟಿಎಂಸಿಯೊಂದಿಗೆ ಮೈತ್ರಿಯ ಬಗ್ಗೆ ಹೆಚ್ಚು ಉತ್ಸುಕತೆ ಹೊಂದಿಲ್ಲದ ಕಾಂಗ್ರೆಸ್ , ಟಿಎಂಸಿಯನ್ನು ವಿಶ್ವಾಸಾರ್ಹವಲ್ಲದ ಮಿತ್ರ ಪಕ್ಷ ಎಂದು ಹೇಳಿದೆ.
ಕಾಂಗ್ರೆಸ್ ಮತ್ತು ಟಿಎಂಸಿ ನಡುವಿನ ಸಂಬಂಧವು 2021 ರಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿತ್ತು.ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಪಕ್ಷ ವಿಫಲವಾಗಿದ್ದು ಕಾಂಗ್ರೆಸ್ ಅಸಮರ್ಥ' ಪಕ್ಷ ಎಂದು ಕರೆದು ಟೀಕಿಸಿತ್ತು.