ದಕ್ಷಿಣ ಮುಂಬೈ, ಜ 22 (DaijiworldNews/KP): ನಗರದ ಟಾರ್ಡಿಯೊದ ನಾನಾ ಚೌಕ್ನಲ್ಲಿರುವ 20 ಮಹಡಿಯ ಕಮಲಾ ಬಿಲ್ಡಿಂಗ್ನಲ್ಲಿ ಇಂದು ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಮಲಾ ಬಿಲ್ಡಿಂಗ್ನ 18ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು 13 ಅಗ್ನಿಶಾಮಕ ವಾಹನಗಳು ಮತ್ತು ಏಳು ಜಂಬೋ ಟ್ಯಾಂಕರ್ಗಳನ್ನು ನಿಯೋಜಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಅಗ್ನಿ ಅವಘಡದಲ್ಲಿ ಗಾಯಗೊಂಡವರನ್ನು 5 ಆಂಬುಲೆನ್ಸ್ ಸೇವೆ ಒದಗಿಸಿ ಸಮೀಪದ ಭಾಟಿಯಾ ಮತ್ತು ನಾಯರ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಎಎನ್ಐ ತಿಳಿಸಿದೆ.
ಇಂದು ಬೆಳಗ್ಗೆ ಈ ದುರ್ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರು ನಾಯರ್ ಆಸ್ಪತ್ರೆಗೆ ಕರೆದೊಯ್ಯವಾಗ ದಾರಿ ಮದ್ಯೆ ಉಸಿರು ನಿಲ್ಲಿಸಿದ್ದಾರೆ, ಇನ್ನು ಮೂವರು ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು, 12.20ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ, ಅವಘಡದಲ್ಲಿ ಇದುವರೆಗೂ 7 ಮಂದಿ ಮೃತಪಟ್ಟಿದ್ದು. 17 ಮಂದಿಗೆ ಸಣ್ಣ ಪುಟ್ಟ ಗಾಯಾಗಳೊಂದಿಗೆ ಪಾರಾಗಿದ್ದಾರೆಂದು ಮಾಹಿತಿ ದೊರಕಿದೆ .
ಮುಂಬೈ ಮೇಯರ್ ಕಿಶೋರಿ ಪಡ್ನೇಕರ್ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.