ಬೆಂಗಳೂರು, ಜ 22 (DaijiworldNews/HR): ಕರ್ನಾಟಕದಲ್ಲಿ ಕೊರೊನಾ ಪ್ರಕರಣ ಕಡಿಮೆಯಿದ್ದಾಗ ಕರ್ಫ್ಯೂ ಜಾರಿಗೊಳಿಸಿದ್ದರು, ಇದೀಗ ಕೇಸ್ ಹೆಚ್ಚಾದಾಗ ಕರ್ಫ್ಯೂ ತೆಗೆದಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಕಡಿಮೆ ಕೇಸ್ ಇದ್ದಾಗ ಕರ್ಫ್ಯೂ ಮಾಡಿದ್ರು ಕೇಸ್ ಹೆಚ್ಚಾದಾಗ ಕರ್ಫ್ಯೂ ತೆಗೆದಿದ್ದಾರೆ. ರೈತರು ನಷ್ಟ ಅನುಭವಿಸಿದ್ರೂ ಕಾರ್ಯಕ್ರಮ ಕೊಟ್ಟಿಲ್ಲ. ಸಿಮೆಂಟ್, ಕಬ್ಬಿಣದ ದರ ಇಳಿಸಲು ಪ್ರಯತ್ನಿಸಿದ್ರಾ? ಎಂದು ಪ್ರಶ್ನಿಸಿರುವ ಅವರು, ಸರ್ಕಾರ ಪ್ರಾಕ್ಟಿಕಲ್ ಆಗಿ ಯೋಜನೆ ಜಾರಿ ಮಾಡಲಿ. ಅವೈಜ್ಞಾನಿಕ ರೂಲ್ಸ್ ಬೇಡ ಎಂದಿದ್ದಾರೆ.
ಇನ್ನು ರಾಜ್ಯ ಬಿಜೆಪಿ ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿಗೆ ತಂದು ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆ ತಡೆದು ಜನರಿಗೆ ಬಹಳ ನಷ್ಟ ಆಗುವ ರೀತಿ ನಡೆದುಕೊಂಡ್ರು. ಸರ್ಕಾರ ಪ್ರಾಕ್ಟಿಕಲ್ ಆಗಿ ಯೋಜನೆ ಜಾರಿ ಮಾಡಲಿ. ಆಂಧ್ರ, ತೆಲಂಗಾಣದಲ್ಲಿ ಯಾವುದೇ ಕರ್ಪ್ಯೂ ಇಲ್ಲ. ಇಲ್ಲಿ ಯಾಕೆ ಕರ್ಪ್ಯೂ ಜಾರಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.