ನವದೆಹಲಿ, ಜ 22 (DaijiworldNews/HR): ಕೊರೊನಾ ಲಸಿಕೆಗಾಗಿ ಒಂದೇ ಮೊಬೈಲ್ ಸಂಖ್ಯೆಯನ್ನು ಬಳಸಿ ಇದುವರೆದೆ ನಾಲ್ವರು ಲಸಿಕೆ ಪಡೆಯೋದಕ್ಕೆ ಅವಕಾಶ ನೀಡಲಾಗಿದ್ದು, ಇನ್ಮುಂದೆ ಒಂದೇ ಮೊಬೈಲ್ ಸಂಖ್ಯೆ ಮೂಲಕ ಆರು ಮಂದಿ ಲಸಿಕೆಗಾಗಿ ಕೋವಿನ್ ಆಯಪ್ ಮೂಲಕ ನೋಂದಣಿ ಮಾಡಿಕೊಳ್ಳೋದಕ್ಕೆ ಅವಕಾಶ ನೀಡಲಾಗಿದೆ ಎಂದು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು, "ಕೊರೊನಾ ಲಸಿಕೆ ಪಡೆಯೋದಕ್ಕೆ ಇದುವರೆಗೆ ಒಂದೇ ಮೊಬೈಲ್ ಸಂಖ್ಯೆಯಡಿ ನಾಲ್ವರು ನೋಂದಣಿ ಮಾಡಿಕೊಳ್ಳೋದಕ್ಕೆ ಅವಕಾಶ ನೀಡಲಾಗಿತ್ತು. ಈ ಮಿತಿಯನ್ನು ಹೆಚ್ಚಳ ಮಾಡಲಾಗಿದ್ದು, ಇನ್ಮುಂದೆ ಒಂದೇ ಮೊಬೈಲ್ ಸಂಖ್ಯೆಯಿಂದ ಆರು ಜನರು ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಲು ಅನುಮಿತಿಸಲಾಗಿದೆ" ಎಂದರು.
ಇನ್ನು ದೇಶಾದ್ಯಂತ ಕೊರೊನಾ ಮೊದಲ ಡೋಸ್, ಎರಡನೇ ಡೋಸ್ ಇದೀಗ ಬೂಸ್ಟರ್ ಡೋಸ್ ಲಸಿಕೆಯನ್ನು ನೀಡಲಾಗುತ್ತಿದ್ದು, ಇದಲ್ಲದೇ 15-18 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡೋದಕ್ಕೆ ಪ್ರಾರಂಭಿಸಲಾಗಿದ್ದು, ಈ ಸಂದರ್ಭದಲ್ಲಿಯೇ ಲಸಿಕಾಕರಣಕ್ಕೆ ಒಂದೇ ಮೊಬೈಲ್ ಸಂಖ್ಯೆಯನ್ನು ಆರು ಜನರಿಗೆ ನೀಡುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.