ಬೆಂಗಳೂರು, ಜ 22 (DaijiworldNews/HR): ರಾಜ್ಯದಲ್ಲಿ ಕೊರೊನಾ ನಂಬರ್ ಹೆಚ್ಚಿದ್ದರೂ ಕಡಿಮೆ ಪರಿಣಾಮ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕೊರೊನಾ ನಂಬರ್ ಹೆಚ್ಚಿದ್ರೂ ಕಡಿಮೆ ಪರಿಣಾಮ ಇದೆ. ಜೀವ ಉಳಿಯಬೇಕು. ಜೀವನವೂ ಉಳಿಯಬೇಕು. ಕೊರೊನಾ ಯಾರನ್ನೂ ಬಿಟ್ಟಿಲ್ಲ. ಹೀಗಾಗಿ ಎಲ್ಲವನ್ನೂ ಗಮನಿಸಿ ನಿರ್ಧಾರ ಕೈಗೊಳ್ಳಲಾಗಿದೆ" ಎಂದರು.
ಇನ್ನು ಕೊರೊನಾ ಸಂಬಂಧ ವರ್ಚುವಲ್ ಕಾನ್ಫರೆನ್ಸ್ ನಡೆಸಲಿದ್ದು, ಸಭೆಯಲ್ಲಿ ಮೇಕೆದಾಟು ವಿವಾದ ಬಗೆಹರಿಸುವ ಕುರಿತು ಚರ್ಚೆ ನಡೆಸಲಾಗುವುದು. ಜಲವಿವಾದ ಕುರಿತು ಈಗಾಗಲೇ ಹಲವು ಸಭೆಗಳನ್ನು ನಡೆಸಿದ್ದೇನೆ. ಜಲವಿವಾದ ಬಗೆಹರಿಸುವ ನಿಟ್ಟಿನಲ್ಲಿ ವರ್ಚುವಲ್ ಕಾನ್ಫರೆನ್ಸ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.