ಮುಂಬೈ, ಜ 22 (DaijiworldNews/HR): 20 ಅಂತಸ್ತಿನ ದೊಡ್ಡ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಏಳು ಮಂದಿ ಮೃತಪಟ್ಟಿರುವ ಘಟನೆ ನಗರದ ಟಾರ್ಡಿಯೊದಲ್ಲಿನ ನಾನಾ ಚೌಕ್ನಲ್ಲಿರುವ ಕಮಲಾ ಬಿಲ್ಡಿಂಗ್ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಇತರ ಸಿಬ್ಬಂದಿಗಳು ಆಗಮಿಸಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ ಏಳು ಮಂದಿ ಮೃತಪಟ್ಟಿದ್ದಾರೆ.
ಇನ್ನು 20 ಅಂತಸ್ತಿನ ಕಟ್ಟಡದ 18ನೇ ಮಹಡಿಯಲ್ಲಿ 3ನೇ ಹಂತದ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯನ್ನು ನಿಯಂತ್ರಿಸಲು 13 ಅಗ್ನಿಶಾಮಕ ವಾಹನಗಳು ಮತ್ತು ಏಳು ಜಂಬೋ ಟ್ಯಾಂಕರ್ಗಳನ್ನು ನಿಯೋಜಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಪ್ರಸ್ತುತ ಘಟನಾ ಸ್ಥಳದಲ್ಲಿ 5 ಆಂಬುಲೆನ್ಸ್ ಸೇವೆ ಒದಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.