ನವದೆಹಲಿ, ಜ 21 (DaijiworldNews/HR): ಕೊರೊನಾ ಗಂಭೀರ ಲಕ್ಷಣಗಳನ್ನು ಹೊಂದಿದ್ದರೂ 18 ವರ್ಷ ಕೆಳಗಿನ ಮಕ್ಕಳಿಗೆ ಆಯಂಟಿವೈರಲ್ ಹಾಗೂ ಮೊನೊಕ್ಲೋನಲ್ ಆಯಂಟಿಬಾಡಿಗಳನ್ನು ಶಿಫಾರಸು ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಮಕ್ಕಳು ಹಾಗೂ 18 ವರ್ಷಕ್ಕಿಂತ ಕೆಳಪಟ್ಟವರು ಕೊರೊನಾ ಮಾರ್ಗಸೂಚಿಗಳನ್ನು ಪರಿಷ್ಕರಣೆಯನ್ನು ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯವು ಐದು ವರ್ಷಕ್ಕಿಂತ ಕೆಳಪಟ್ಟ ಮಕ್ಕಳಿಗೆ ಮಾಸ್ಕ್ಗಳನ್ನು ಶಿಫಾರಸು ಮಾಡುವುದಿಲ್ಲ ಎಂದಿದೆ.
ಇನ್ನು 6 ರಿಂದ 11 ವರ್ಷ ಪ್ರಾಯದ ಮಕ್ಕಳು ಪೋಷಕರ ಮಾರ್ಗದರ್ಶನದಲ್ಲಿ ಮಾಸ್ಕ್ಗಳನ್ನು ಸುರಕ್ಷಿತವಾಗಿ ಹಾಗೂ ಸರಿಯಾದ ರೀತಿಯಲ್ಲಿ ಹಾಕಿಕೊಳ್ಳಬಹುದೇ ಎಂಬ ಸಾಮರ್ಥ್ಯವನ್ನು ಅವಲಂಬಿಸಿ ಮಾಸ್ಕ್ಗಳನ್ನು ಧರಿಸಬಹುದಾಗಿದೆ. ಆದರೆ 12 ವರ್ಷ ಮೇಲ್ಪಟ್ಟ ಮಕ್ಕಳು ಕಡ್ಡಾಯವಾಗಿ ಫೇಸ್ಮಾಸ್ಕ್ಗಳನ್ನು ಧರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.