ಮುಂಬೈ, ಜ 20 (DaijiworldNews/MS): ಬಾಲಿವುಡ್ ನೃತ್ಯ ನಿರ್ದೇಶಕ ರೆಮೊ ಡಿಸೋಜಾ ಅವರ ಸೋದರ ಸಂಬಂಧಿ ಜೇಸನ್ ಸವಿಯೋ ವಾಟ್ಕಿನ್ಸ್ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಟ್ಕಿನ್ಸ್ ಅವರು, ಅಂಧೇರಿ ಪಶ್ಚಿಮದ ಯಮುನಾ ನಗರದಲ್ಲಿನ ಫ್ಲಾಟ್ ನ ಅವರ ನಿವಾಸದಲ್ಲಿ ಗುರುವಾರ ಶವವಾಗಿ ಪತ್ತೆಯಾಗಿದ್ದು , ಮನೆಯ ಸದಸ್ಯರು ಮನೆಯಿಂದ ಹೊರಗೆ ಹೋಗಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದರೆ ಎಂದು ವರದಿಯಾಗಿದೆ
ಓಶಿವಾರ ಪೊಲೀಸರು ಎಡಿಆರ್ ದಾಖಲಿಸಿಕೊಂಡಿದ್ದಾರೆ. 42 ವರ್ಷದ ಜೇಸನ್ ಗಾಂಜಾ ಚಟ ಹೊಂದಿದ್ದು, ಕೆಲವು ಆರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತಿದ್ದರು. ತಾಯಿಯ ಮರಣದ ನಂತರ, ಆಘಾತಕ್ಕೊಳಗಾಗಿದ್ದ ಅವರು ಗಾಂಜಾ ದಾಸರಾಗಿದ್ದರು. ಜೇಸನ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೆಮೊ ಡಿಸೋಜಾ ಇನ್ಸ್ಟಾಗ್ರಾಮ್ ನಲ್ಲಿ ಜೇಸನ್ ಜೊತೆಗಿನ ಚಿತ್ರವನ್ನು ಹಂಚಿಕೊಂಡು, " ನೀವು ನಮ್ಮ ಹೃದಯವನ್ನು ಮುರಿದಿದ್ದೀರಿ ಸಹೋದರ, ನೀವು ಅಂತಿಮವಾಗಿ ಶಾಂತಿಯನ್ನು ಕಂಡುಕೊಂಡಿದ್ದೀರಿ ಎಂದು ಭಾವಿಸುತ್ತೇವೆ" ಬರೆದುಕೊಂಡಿದ್ದಾರೆ.