ನವದೆಹಲಿ, ಜ 20 (DaijiworldNews/MS): ಭಾರತದಲ್ಲಿ ಹೊಸ ಕೊರೋನಾ ಸೋಂಕಿತರ ಸಂಖ್ಯೆ ಮೂರೂವರೆ ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3,47,254 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ. ಇನ್ನು ಒಂದೇ ದಿನ 703 ಮಂದಿ ಸಾಂಕ್ರಮಿಕಕ್ಕೆ ಬಲಿಯಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ 3,47,254 ಹೊಸ ಕೋವಿಡ್ ಪ್ರಕರಣಗಳು (ನಿನ್ನೆ ವರದಿಯಾದ ಪ್ರಕರಣಗಳಿಗಿಂತ 29,722 ಹೆಚ್ಚು), 703 ಸಾವುಗಳು ಮತ್ತು 2,51,777 ಚೇತರಿಕೆಗಳು ಎಂದು ಪ್ರಕಟನೆ ತಿಳಿಸಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 20,18,825ಕ್ಕೆ ತಲುಪಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 2,23,990 ಮಂದಿ ಗುಣಮುಖರಾಗುವುದರೊಂದಿಗೆ
ದೈನಂದಿನ ಪಾಸಿಟಿವಿಟಿ ದರ 17.94% ಹೆಚ್ಚಳವಾಗಿದೆ. ಇಲ್ಲಿಯವರೆಗೆ 9,692 ಒಟ್ಟು ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ರೂಪಾಂತರಿ ಸೋಂಕಿನಲ್ಲಿಯೂ ಶೇಕಡವಾರಿ 4.36% ಹೆಚ್ಚಳವಾಗಿದೆ.