ಛತ್ತೀಸ್ಗಡ ,ಜ 19 (DaijiworldNews/HR): ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಓರ್ವ ಶಂಕಿತ ನಕ್ಸಲೀಯ ಮೃತಪಟ್ಟಿರುವ ಘಟನೆ ಛತ್ತೀಸ್ಗಡದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಪಿಐಯ ವಿಭಾಗೀಯ ಸಮಿತಿ ಸದಸ್ಯರು ಹಾಗೂ 35ರಿಂದ 40 ನಕ್ಸಲೀಯರು ಮೂರು ಜಿಲ್ಲೆಯ ಸಂಗಮ ಪ್ರದೇಶದ ಕಾಡಿನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಭದ್ರತಾ ಪಡೆ ಸೋಮವಾರ ರಾತ್ರಿ ಛತ್ತೀಸ್ಗಡದ ಸುಕ್ಮಾ ಜಿಲ್ಲೆಯ ಪ್ರದೇಶ ಸುತ್ತುವರಿದು ಕಾರ್ಯಾಚರಣೆ ನಡೆಸಿತು ಎಂದು ಸುಕ್ಮಾ ಪೊಲೀಸ್ ಅಧೀಕ್ಷಕ ಸುನೀಲ್ ಶರ್ಮಾ ತಿಳಿಸಿದ್ದಾರೆ.
ಇನ್ನು ಇಂದು ಬೆಳಗ್ಗೆ 6.45ರ ಹೊತ್ತಿಗೆ ನಕ್ಸಲೀಯರು ಹಾಗೂ ತೊಂಗ್ಪಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮರ್ಜುಮ್ ಹಿಲ್ಸ್ ನ ಗಸ್ತು ತಂಡದ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಹೇಳಿದ್ದಾರೆ.