ಪಾಟ್ನಾ, ಜ 18 (DaijiworldNews/HR): ಕೊರೊನಾ ಲಸಿಕೆಯ ಐದು ಡೊಸ್ಗಳನ್ನು ಪಾಟ್ನಾದ ಸಿವಿಲ್ ಸರ್ಜನ್ ಪಡೆದಿದ್ದಾರೆ ಎಂದು ದಾಖಲೆಗಳು ತೋರಿಸಿದ ನಂತರ ಬಿಹಾರ ಸರ್ಕಾರ ತನಿಖೆಗೆ ಆದೇಶಿಸಿದೆ.
ಸಿವಿಲ್ ಸರ್ಜನ್, ಡಾ ವಿಭಾ ಕುಮಾರಿ ಸಿಂಗ್ ಅವರು ನಿಯಮಗಳ ಪ್ರಕಾರ ಕೇವಲ ಮೂರು ಬಾರಿ ಲಸಿಕೆಯನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿದರು.ತನ್ನ ಪ್ಯಾನ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ಬೇರೊಬ್ಬರು ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.
ಇನ್ನು ಕೋವಿನ್ ಪೋರ್ಟಲ್ ಪ್ರಕಾರ, ವಿಭಾ ಕುಮಾರಿಯವರು ಜನವರಿ 28, 2021 ರಂದು ಲಸಿಕೆಯ ಮೊದಲ ಡೋಸ್ ಅನ್ನು ತೆಗೆದುಕೊಂಡಿದ್ದು, ಮಾರ್ಚ್ 12, 2021 ರಂದು ಎರಡನೇ ಡೋಸ್ಗೆ ನೋಂದಾಯಿಸಿಕೊಂಡಿದ್ದು ಮಾರ್ಚ್ ತಿಂಗಳಲ್ಲಿ ಸಂಪೂರ್ಣವಾಗಿ ಎರಡು ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಆದರೆ ಸರ್ಕಾರಿ ದಾಖಲೆಗಳ ಪ್ರಕಾರ ಅವರು ಐದು ಬಾರಿಗೆ ಲಸಿಕೆಯ ಪ್ರಮಾಣವನ್ನು ಪಡೆದರು.
ಈ ಕುರಿತು ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಪ್ರತಿಕ್ರಿಯಿಸಿ, ನಾವು ತನಿಖೆಯನ್ನು ಪ್ರಾರಂಭಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.