ಒಡಿಶಾ, ಜ 17 (DaijiworldNews/HR): ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ(88) ಭಾನುವಾರ ರಾತ್ರಿ ರಾಯಗಡ ಜಿಲ್ಲೆಯ ಗುಣಪುರದ ತಮ್ಮ ನಿವಾಸದಲ್ಲಿ ಕೊನೆಯುಸಿಳೆದಿದು, ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
1934ರ ಏಪ್ರಿಲ್ 18ರಂದು ಬಾಲಸೋರ್ನಲ್ಲಿ ಜನಿಸಿದ ಶಾಂತಿ ದೇವಿ ಡಾ. ರತನ್ ದಾಸ್ ಎಂಬುರನ್ನು ಮದುವೆಯಾಗಿದ್ದು, ಬಳಿಕ ಪತಿಯ ಸಹಕಾರದೊಂದಿಗೆ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇನ್ನು ಬುಡಕಟ್ಟು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಶಾಂತಾದೇವಿ ಅವರು ಕುಷ್ಠ ರೋಗಿಗಳ ಆರೈಕೆಗಾಗಿ ಆಶ್ರಮವೊಂದನ್ನೂ ಸ್ಥಾಪಿಸಿ ಹಲವರ ಕಷ್ಟಕ್ಕೆ ಸ್ಪಂದಿಸಿದ್ದರು. ಇವರ ಸೇವೆಗೆ ಪದ್ಮಶ್ರೀ ಪ್ರಶಸ್ತಿ, ಜಮುನಾಲಾಲ್ ಬಜಾಜ್ ಪ್ರಶಸ್ತಿ, ರಾಧಾನಾಥ್ ರಥ್ ಶಾಂತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ಶಾಂತಾದೇವಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಶಾಂತದೇವಿ ಜೀ ಅವರು ಬಡವರು ಮತ್ತು ಹಿಂದುಳಿದವರ ಧ್ವನಿಯಾಗಿ ನೆನಪಿನಲ್ಲಿ ಉಳಿಯುತ್ತಾರೆ. ಕಷ್ಟ ನಿವಾರಿಸಲು, ಆರೋಗ್ಯಕರ ಮತ್ತು ನ್ಯಾಯಯುತ ಸಮಾಜ ರಚಿಸಲು ನಿಸ್ವಾರ್ಥವಾಗಿ ಕೆಲಸ ಮಾಡಿದ್ದಾರೆ. ಅವರ ನಿಧನದ ಸುದ್ದಿ ಕೇಳಿ ನೋವಾಗಿದೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.