ರಾಂಚಿ, ಜ 17 (DaijiworldNews/HR): ಜಾರ್ಖಂಡ್ನ ಖುಂಟಿ ಜಿಲ್ಲೆಯಲ್ಲಿ ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಸೇರಿದ ಮೂವರು ನಕ್ಸಲರನ್ನು ಬಂಧಿಸಲಾಗಿದ್ದು, ಅವರಲ್ಲಿ 14 ವರ್ಷದ ಬಾಲಕನೂ ಸೇರಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಪೊಲೀಸರು ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಭಾನುವಾರ ರಾನಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ರಂಗೋಡಿ ಗ್ರಾಮದಲ್ಲಿ ಮೂವರು ನಕ್ಸಲರನ್ನು ಬಂಧಿಸಿದ್ದರು.
ಇನ್ನು ಬಂಧಿತ ಉಗ್ರರನ್ನು ವಿಶ್ರಮ್ ಕೊಂಗಾಡಿ ಮತ್ತು ಕುಲೇನ್ ಕೊಂಗಾಡಿ ಎಂದು ಗುರುತಿಸಗಿದ್ದು, ಈ ಇಬ್ಬರು ವಯಸ್ಕ ನಕ್ಸಲರು ಕ್ರಮವಾಗಿ ಏಳು ಮತ್ತು ಐದು ವಿಭಿನ್ನ ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಬಂಧಿತ ನಕ್ಸಲರಿಂದ ಹಲವಾರು ಕಾಟ್ರಿಡ್ಜ್ಗಳು, ಪಿಎಲ್ಎಫ್ಐ ಕರಪತ್ರಗಳು, ದೇಣಿಗೆ ರಸೀದಿಗಳು, ಮೊಬೈಲ್ ಫೋನ್ಗಳು ಮತ್ತು ಮೋಟಾರ್ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.