ನವದೆಹಲಿ, ಜ 17 (DaijiworldNews/HR): ಉತ್ತರಾಖಂಡದ ಸಚಿವ ಹರಾಕ್ ಸಿಂಗ್ ರಾವತ್ ಅವರನ್ನು ಪಕ್ಷವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಬಿಜೆಪಿ ಪಕ್ಷದ ಸದಸ್ಯತ್ವದಿಂದ ಆರು ವರ್ಷದ ಅವಧಿಗೆ ಉಚ್ಛಾಟಿಸಲಾಗಿದೆ ಎಂದು ತಿಳಿದು ಬಂದಿದೆ.
ಶನಿವಾರ ನಡೆದ ಬಿಜೆಪಿ ಸಭೆಗೆ ಗೈರಾಗಿದ್ದ ರಾವತ್ ಅವರು ಭಾನುವಾರದಂದು ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರನ್ನು ಭೇಟಿಯಾಗಿರುವ ಬೆನ್ನಲ್ಲೇ ಬಿಜೆಪಿ ರಾವತ್ ವಿರುದ್ಧ ಶಿಸ್ತುಕ್ರಮ ಕೈಗೊಂಡಿದೆ.
ಹರಾಕ್ ಸಿಂಗ್ ರಾವತ್ ಅವರು ತಮ್ಮ ಪತ್ನಿ ಸಹಿತ ಕುಟುಂಬದ ಮೂವರಿಗೆ ವಿಧಾನಸಭೆ ಚುನಾವಣೆಯ ಟಿಕೆಟ್ ಬಯಸಿದ್ದರು. ಆದರೆ ಒಂದು ಕುಟುಂಬಕ್ಕೆ ಪಕ್ಷದಿಂದ ಒಂದು ಹುದ್ದೆ ಮಾತ್ರ ಎನ್ನುವ ನಿಯಮವನ್ನು ರಾವತ್ ಮರೆತಿದ್ದರು ಬಿಜೆಪಿ ತಿಳಿಸಿದೆ.
ರಾವತ್ ಅವರು 2017ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಟಿಕೆಟ್ ಪಡೆದುಕೊಂಡು ಬಳಿಕ ಸಂಪುಟದಲ್ಲಿ ಸ್ಥಾನ ಪಡೆದಿದ್ದರು.