ಬೆಂಗಳೂರು, ಜ 16 (DaijiworldNews/HR): ಕೊರೊನಾ ಸೋಂಕು ದೃಢಪಟ್ಟಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೀಗ ಗುಣಮುಖರಾಗಿದ್ದು, ಪ್ರತ್ಯೇಕ ವಾಸದಲ್ಲಿದ್ದ ಅವರು ನಾಳೆಯಿಂದ ಭೌತಿಕವಾಗಿ ಕಾರ್ಯ ಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬಸವರಾಜ ಬೊಮ್ಮಾಯಿ ಅವರಿಗೆ ಜನವರಿ 10 ರಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಅಂದಿನಿಂದ ಪ್ರತ್ಯೇಕ ವಾಸದಲ್ಲಿದ್ದರು.
ಇನ್ನು ಬೊಮ್ಮಾಯಿ ಅವರಿಗೆ ಸದ್ಯಕ್ಕೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಹೊಸ ಎಸ್ ಒಪಿ ಪ್ರಕಾರ ಒಂದು ವಾರದ ಪ್ರತ್ಯೇಕವಾಸದ ಅವಧಿ ನಾಳೆಗೆ ಪೂರ್ಣಗೊಳ್ಳಲಿದೆ. ಮುಖ್ಯಮಂತ್ರಿ ತಮ್ಮ ನಿವಾಸದಿಂದ ಹೊರ ಬಂದು ಕರ್ತವ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.