ಬೆಂಗಳೂರು, ಜ 16 (DaijiworldNews/MS): ಸ್ನಾನಕ್ಕೆಂದು ಹೋಗಿದ್ದ ವೇಳೆ ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ ಹಾಗೂ ಮಗಳು ಸಾವನ್ನಪ್ಪಿದ ದಾರುಣ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.
ಬೆಂಗಳೂರಿನ ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಈ ದುರಂತ ಸಂಭವಿಸಿದ್ದು, 35 ವರ್ಷದ ತಾಯಿ ಮಂಗಳಾ ಮತ್ತು 7 ವರ್ಷದ ಮಗಳು ಗೌತಮಿ ಮೃತಪಟ್ಟಿದ್ದಾರೆ.
ರಾಮನಗರ ಮೂಲದ ಈ ಕುಟುಂಬ 15 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದು, ಮನೆಯಲ್ಲಿ ಗಂಡ, ಹೆಂಡತಿ, ಒಬ್ಬ ಮಗಳು ಮಾತ್ರವಿದ್ದು, ಬೆಳಗ್ಗೆ ಪತಿ ನರಸಿಂಹಮೂರ್ತಿ ಕೆಲಸಕ್ಕೆ ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ.
ತಾಯಿ ಮಗಳು ಸ್ನಾನಕ್ಕೆಂದು ಬಾತ್ ರೂಂ ಗೆ ಹೋದಾಗ ಗ್ಯಾಸ್ ಗೀಸರ್ನಿಂದ ಅನಿಲ ಸೋರಿಕೆ ಉಂಟಾಗಿದ್ದು, ಅದರಿಂದ ಉಸಿರುಗಟ್ಟಿ ತಾಯಿ-ಮಗಳು ಇಬ್ಬರೂ ಸಾವಿಗೀಡಾಗಿದ್ದಾರೆ. ಮಾಲೀಕರ ಮನೆಯ ಮಹಿಳೆ ಮನೆ ಬಳಿ ಬಂದಾಗ ಘಟನೆ ಗಮನಕ್ಕೆ ಬಂದಿದೆ.