ಹೊಸದಿಲ್ಲಿ, ಜ 16 (DaijiworldNews/HR): ಬಿಜೆಪಿಯರು ಮಾಡುವ ದ್ವೇಷದ ರಾಜಕಾರಣ ದೇಶಕ್ಕೆ ಹಾನಿಕಾರಕ ಮತ್ತು ನಿರುದ್ಯೋಗಕ್ಕೂ ಕಾರಣವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿಯ ದ್ವೇಷದ ರಾಜಕೀಯವು ದೇಶಕ್ಕೆ ತುಂಬಾ ಹಾನಿಕಾರಕವಾಗಿದ್ದು, ಈ ದ್ವೇಷವೂ ನಿರುದ್ಯೋಗಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಇನ್ನು ಸಮಾಜದಲ್ಲಿ ಶಾಂತಿಯಿಲ್ಲದೆ ದೇಶೀಯ ಮತ್ತು ವಿದೇಶಿ ಕೈಗಾರಿಕೆಗಳು ನಡೆಯಲು ಸಾಧ್ಯವಿಲ್ಲ. ಪ್ರತಿದಿನ ನಿಮ್ಮ ಸುತ್ತ ಬೆಳೆಯುತ್ತಿರುವ ಈ ದ್ವೇಷವನ್ನು ಸಹೋದರತ್ವದಿಂದ ಸೋಲಿಸುತ್ತೀರಾ. ನೀವು ನನ್ನೊಂದಿಗೆ ಇದ್ದೀರಾ? #ನೋ ಹೇಟ್ ” ಎಂಬ ಹ್ಯಾಶ್ ಟ್ಯಾಗ್ ಹಾಕಿದ್ದಾರೆ.