ಬೆಂಗಳೂರು, ಜ 16 (DaijiworldNews/HR): ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಇದೀಗ ಎಷ್ಟೇ ಕೊರೊನಾ ಪ್ರಕರಣಗಳು ಪತ್ತೆಯಾದರೂ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಟೆಲಿ ಕನ್ಸಲ್ಟೇಷನ್ ಮೂಲಕ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಈಗಾಗಲೇ 10 ಸಾವಿರ ವೈದ್ಯರ ಜತೆ ಚರ್ಚಿಸಿದ್ದು, ಕೋವಿಡ್ ಕೇಸ್ ಎಷ್ಟೇ ಪತ್ತೆಯಾದರೂ ಮನೆಯಿಂದಲೇ ಚಿಕಿತ್ಸೆ ಪಡೆದುಕೊಳ್ಳಬಹುದು ಜನರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಇನ್ನು ಸೆಲ್ಫ್ ಕೋವಿಡ್ ಟೆಸ್ಟ್ ಕಿಟ್ ಬಳಕೆ ಬಗ್ಗೆ ಮಾಹಿತಿ ನೀಡಿರುವ ಅವರು, ಯಾರೂ ಕೂಡ ಸೆಲ್ಫ್ ಟೆಸ್ಟ್ ಕಿಟ್ ಬಳಸುವುದು ಸರಿಯಲ್ಲ, ಸೆಲ್ಫ್ ಕೋವಿಡ್ ಟೆಸ್ಟ್ ಕಾನೂನಾತ್ಮಕವಾಗಿ ತಪ್ಪು ಹಾಗಾಗಿ ಇಂತಹ ಟೆಸ್ಟ್ ಕಿಟ್ ಖರೀದಿ ಬಗ್ಗೆ ಜನರು ಮುಂದಾಗಬಾರದು ಎಂದು ಹೇಳಿದ್ದಾರೆ.