ನವದೆಹಲಿ, ಜ 16 (DaijiworldNews/HR): ಐಷಾರಾಮಿ ಕಾರುಗಳನ್ನು ಗುರಿಯಾಗಿಸಿಕೊಂಡು ಕದಿಯುತ್ತಿದ್ದ 'ಕಾರ್ ಕಿಂಗ್' ಖ್ಯಾತಿಯ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ಸಿವಿಲ್ ಲೈನ್ಸ್ ಪ್ರದೇಶದ ಕುನಾಲ್(42) ಎಂದು ಗುರುತಿಸಲಾಗಿದೆ.
ಕುನಾಲ್ ವಿರುದ್ಧ ದೆಹಲಿಯ ಅನೇಕ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಆತನಿಂದ ಮೂರು ಕಾರು, ಹಲವು ಬಗೆಯ ನಂಬರ್ ಪ್ಲೇಟ್, ಕೀಗಳು ಸೇರಿದಂತೆ ಕಾರಿನ ಬಿಡಿಭಾಗಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಳಿಸರು ತಿಳಿಸಿದ್ದಾರೆ.
ಜನವರಿ 10 ರಂದು ಶ್ರೆತಾಂಕ್ ಅಗರವಾಲ್ ಎಂಬುವರು ತಮ್ಮ ಮನೆ ಬಳಿ ನಿಲ್ಲಿಸಿದ್ದ ಟೊಯೊಟಾ ಫಾರ್ಚುನರ್ ಕಾರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣ ಸಂಬಂಧ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕುನಾಲ್ನನ್ನು ಕಾಶ್ಮೀರದಲ್ಲಿ ಸೆರೆ ಹಿಡಿದಿದ್ದಾರೆ.
ಇನ್ನು 2013ರಿಂದ ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದು, ಕದ್ದ ಕಾರುಗಳನ್ನು ಮಾರಾಟ ಮಾಡುತ್ತಿರುವುದಾಗಿ ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.