ಪುಣೆ, ಜ 16 (DaijiworldNews/HR): ಮಹಿಳೆಯನ್ನು ಅನುಚಿತ ರೀತಿಯಲ್ಲಿ ವ್ಯಕ್ತಿಯೊಬ್ಬ ಮುಟ್ಟಿದ್ದು, ಇದನ್ನು ಖಂಡಿಸಿದ ಒಂದು ದಿನದ ನಂತರ ಆತ ಆಕೆಯನ್ನು ಕೊಲ್ಲಲು ಯತ್ನಿಸಿರುವ ಘಟನೆ ಪುಣೆಯ ಗುರುವಾರ್ ಪೇಠ್ ಪ್ರದೇಶದಲ್ಲಿ ನಡೆದಿದೆ.
ಮಹಿಳೆ ತನ್ನ ಪತಿಯೊಂದಿಗೆ ಕ್ಯಾಂಪ್ ಪ್ರದೇಶಕ್ಕೆ ಖರೀದಿಗೆ ಹೋಗಿದ್ದಾಗ ಆರೋಪಿ ಅನುಚಿತವಾಗಿ ಸ್ಪರ್ಶಿಸಿದ್ದು, ಸಾರ್ವಜನಿಕವಾಗಿ ಆತ ಅನುಚಿತ ವರ್ತನೆ ತೋರಿದ್ದಕ್ಕೆ ಮಹಿಳೆ ಕಿಡಿಕಾರಿ ಬೈದಾಡಿದ್ದಾಳೆ.
ಇನ್ನು ಮರುದಿನ ಮಹಿಳೆ ತನ್ನ ಪತಿಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರ್ ನಲ್ಲಿ ಹಿಂಬಾಲಿಸಿದ ಆರೋಪಿ ಕೊಂಡ್ವಾ ಪ್ರದೇಶದಲ್ಲಿ ಬೈಕ್ ಗೆ ತನ್ನ ಕಾರ್ ನಿಂದ ಡಿಕ್ಕಿ ಹೊಡೆದು ಕೊಲ್ಲಲು ಯತ್ನಿಸಿದ್ದಾನೆ ಎಂದು ದೂರು ನೀಡಲಾಗಿದ್ದು, ಕೊಂಡ್ವಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆಯಲ್ಲಿ ಮಹಿಳೆ ಮತ್ತು ಆಕೆಯ ಪತಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.