ಬೆಂಗಳೂರು, ಜ 16 (DaijiworldNews/MS): ಸದ್ಯದ ಕೊವೀಡ್ ಗಂಭೀರ ಸ್ವರೂಪದಲ್ಲ, ಸೋಂಕಿನ ಕಾರಣಕ್ಕೆ ಶಾಲೆಗಳಿಗೆ ರಜೆ ನೀಡಿದರೆ ಮಕ್ಕಳ ಬದುಕು ಹಾಳಾಗುತ್ತದೆ.ಆನ್ಲೈನ್ ಶಿಕ್ಷಣ ಶ್ರೀಮಂತರ ಮಕ್ಕಳಿಗೆ ಮತ್ತು ನಗರ ಪ್ರದೇಶಕ್ಕೆ ಮಾತ್ರ ಸೂಕ್ತವಾಗಿದ್ದು, ಇದರಿಂದ ಗ್ರಾಮೀಣ ಹಾಗೂ ಬಡವರ ಮಕ್ಕಳು ಕಲಿಕೆಯಿಂದ ದೂರ ಉಳಿಯುತ್ತಾರೆ . ಹೀಗಾಗಿ ಅಂತರ ಕಾಪಾಡಿಕೊಂಡು ಶಾಲೆ ನಡೆಸುವುದೇ ಸೂಕ್ತ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಆನ್ಲೈನ್ ಶಿಕ್ಷಣ ಕಲಿಕೆ ಸರಿಯಲ್ಲ. ಇದು ನಗರ ಪ್ರದೇಶಕ್ಕೆ ಮಾತ್ರ ಅನುಕೂಲ .ಆನ್ಲೈನ್ ಕ್ಲಾಸ್ನಿಂದ ಶ್ರೀಮಂತ ಮಕ್ಕಳು ಕಲಿಯುತ್ತಾರೆ. ಬಡವರ ಮಕ್ಕಳು ಕಲಿಕೆಯಿಂದ ದೂರ ಉಳಿಯುತ್ತಾರೆ. ಇನ್ನೂ ಶಾಲೆಗಳಿಗೆ ಬಿಡುವು ಕೊಟ್ಟರೆ ಮಕ್ಕಳ ಬದುಕು ಹಾಳಾಗುತ್ತೆ. ಹೀಗಾಗ್ ಅಂತರ ಕಾಪಾಡಿಕೊಂಡು ಶಾಲೆ ನಡೆಸಲು ಹೊರಟ್ಟಿ ಸಲಹೆ ನೀಡಿದ್ದಾರೆ.
ನೆಟ್ವರ್ಕ್ ಸಮಸ್ಯೆ, ವಿದ್ಯುತ್ ಇರಲ್ಲ, ಮೊಬೈಲ್ ಇರಲ್ಲ. ಹೀಗೆ ಹಲವು ಸಮಸ್ಯೆಗಳು ಇರುವುದರಿಂದ ಆನ್ಲೈನ್ ಶಿಕ್ಷಣ ಉಚಿತವಲ್ಲ, ಕೆಲ ಜಿಲ್ಲೆಗಳಲ್ಲಿ 1ರಿಂದ 9ನೇ ತರಗತಿವರೆಗೆ ರಜೆ ಹಿನ್ನೆಲೆ ರಜೆ ನೀಡಲಾಗಿದೆ. ಮಕ್ಕಳನ್ನು ಶಾಲೆಯಿಂದ ದೂರ ಇರಿಸಿದರೆ ಅವರ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಶಾಸಕಾಂಗ, ಕಾರ್ಯಾಂಗವನ್ನು ಬೇರೆ ಮಾಡಬೇಕು ಎಂದ ಅವರು ವಿಧಾನಸೌಧ ಇರುವುದು ಶಾಸಕಾಂಗಕ್ಕೆ ಮಾತ್ರ. ಕಾರ್ಯಾಂಗ ಎಂ.ಎಸ್. ಬಿಲ್ಡಿಂಗ್ಗೆ ಶಿಫ್ಟ್ ಮಾಡಲಿ ಎಂದು ಆಗ್ರಹಿಸಿದ್ದಾರೆ.