ಬೆಂಗಳೂರು, ಜ 15 (DaijiworldNews/MS): ಮೇಕೆದಾಟು ಯೋಜನೆ ವಿರೋಧ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತೆ ಮತ್ತು ನರ್ಮದಾ ಬಚಾವೋ ಚಳವಳಿಯ ನಾಯಕಿ ಮೇಧಾ ಪಾಟ್ಕರ್ ತನ್ನದೇ ಆದ ಆಲೋಚನೆ ಮತ್ತು ಸಿದ್ಧಾಂತದ ಆಧಾರದ ಮೇಲೆ ಹೋರಾಡುತ್ತಾರೆ. ಆದರೆ ನಮ್ಮ ಹೋರಾಟ ವೈಯಕ್ತಿಕ ಹೋರಾಟವಲ್ಲ. ನಾವು ಜನರಿಗಾಗಿ ಹೋರಾಡುತ್ತೇವೆ ಮತ್ತು ಅವರ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸುತ್ತೇವೆ. ಇದು ಜನರ ಜೀವನೋಪಾಯಕ್ಕಾಗಿ ನಡೆಯುವ ಹೋರಾಟ. ನೀರು ನಮ್ಮ ಜೀವನಾಡಿ. ನೀರು ಇದ್ದರೆ ನಾವು ಬದುಕುತ್ತೇವೆ. ಅವರು ಹಿರಿಯ ಮಹಿಳೆ, ಅವರಿಗೆ ಉತ್ತರ ನೀಡಲು ಬೊಮ್ಮಾಯಿ ಸೂಕ್ತ ವ್ಯಕ್ತಿ. ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಪಕ್ಷ ತನ್ನ ಪಾದಯಾತ್ರೆಯನ್ನು ಪುನರಾರಂಭಿಸಲಿದೆ ' ಎಂದು ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಹೇಳಿದರು.
ಮೇಧಾ ಪಾಟ್ಕರ್ ಅವರಿಗೆ ಉತ್ತರ ಕೊಡಲು ಸರ್ಕಾರ ಇದೆ, ನಾವ್ಯಾಕೆ ಉತ್ತರಿಸೋಣ? ನಾನು ಸರ್ಕಾರವಲ್ಲ. ಜಮೀನು ಕಳೆದುಕೊಳ್ಳುತ್ತಿರುವ ತಮ್ಮ ತಾಲ್ಲೂಕಿನ ಜನರೇ ಯೋಜನೆಗೆ ವಿರೋಧ ವ್ಯಕ್ತಪಡಿಸಬೇಕಾದವರು. ನಮ್ಮ ತಾಲೂಕಿಗೆ ಇದರಿಂದ ನಷ್ಟ ಉಂಟಾಗಿದೆ. ಸರ್ಕಾರ ಇಂಥ ಯೋಜನೆಗೆ ಪರಿಸರ ಇಲಾಖೆ ಅನುಮತಿಯಂಥ ಕಾನೂನು ಮಾಡಿರುವುದು ಇವರಿಗಾಗಿಯೇ' ಎಂದರು.
ಬೊಮ್ಮಾಯಿ ಸರಕಾರ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕರ ಮೇಲೆ ಕಂತುಗಳಲ್ಲಿ ಕೇಸು ಹಾಕುತ್ತಿದೆ ಎಂದು ಟೀಕಿಸಿದ ಅವರು, ಒಬ್ಬೊಬ್ಬರ ಮೇಲೆ ಕೇಸು ದಾಖಲಿಸುವ ಬದಲು ಎಲ್ಲರ ಮೇಲೂ ಒಟ್ಟಿಗೆ ಏಕೆ ಪ್ರಕರಣ ದಾಖಲಿಸಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
(ಸರ್ಕಾರ ಮತ್ತು ಬಿಜೆಪಿ) ಎಲ್ಲಾ ಕೋವಿಡ್ ಮಾನದಂಡಗಳನ್ನು ಅನುಸರಿಸಿದ್ದಾರೆಯೇ? ಬಿಜೆಪಿಯ ಜನಾರ್ಶಿವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಮೇಲೆ ಏಕೆ ಪ್ರಕರಣಗಳನ್ನು ಹಾಕಬಾರದು,’’ ಎಂದು ಪ್ರಶ್ನಿಸಿದರು.