ನವದೆಹಲಿ, ಜ 15 (DaijiworldNews/PY): ಭಾರತೀಯ ಸೇನೆ 74ನೇ ಸಂಸ್ಥಾಪನಾ ದಿನದಂದು ಯುದ್ಧದ ಸಮವಸ್ತವನ್ನು ಸಾರ್ವಜನಿಕವಾಗಿ ಮೊದಲ ಬಾರಿಗೆ ಅನಾವರಣಗೊಳಿಸಿತು.
ಈ ವೇಳೆ ಪ್ಯಾರಾಚೂಟ್ ರೆಜಿಮೆಂಟ್ನ ಕಮಾಂಡೋಗಳು ಹೊಸ ಸಮವಸ್ತ್ರ ಧರಿಸಿ, ದೆಹಲಿ ಕ್ಯಾಂಟ್ನ ಪರೇಡ್ ಮೈದಾನದಲ್ಲಿ ಮೆರವಣಿಗೆ ನಡೆಸಿದರು.
ಹೊಸ ಸಮವಸ್ತ್ರವನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ಸಹಯೋಗದಲ್ಲಿ ರಚಿಸಲಾಗಿದೆ.
"ಸೈನಿಕರಿಗೆ ಹೆಚ್ಚಿನ ಸೌಕರ್ಯವನ್ನು ನೀಡುತ್ತದೆ ಹಾಗೂ ವಿನ್ಯಾಸದಲ್ಲಿ ಏಕರೂಪತೆಯನ್ನು ನೀಡುತ್ತದೆ. ಸೇನೆಯ ಕೆಲಸದ ಅಗತ್ಯತೆಗಳನ್ನು ಹಾಗೂ ಸೈನಿಕರ ಯುದ್ಧದ ಆಯಾಸದಲ್ಲಿ ಏಕರೂಪತೆಯ ಅಗತ್ಯವನ್ನು ಗಮನದಲ್ಲಿರಿಸಿ ಇದನ್ನು ವಿನ್ಯಾಸಗೊಳಿಸಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ದೆಹಲಿಯ ಸೇನಾ ಪ್ರಧಾನ ಕಛೇರಿಯಲ್ಲಿ ನಿಯೋಜಿಸಲಾದ ಅಧಿಕಾರಿಗಳು ಪ್ರತಿ ಶುಕ್ರವಾರದಂದು ಈ ಬಟ್ಟೆಗಳನ್ನು ಧರಿಸಿ ಮುಂದೆ ಪ್ರದೇಶಗಳಲ್ಲಿ ನಿಯೋಜಿಸಲಾದ ಸೈನಿಕರೊಂದಿಗೆ ಒಗ್ಗಟ್ಟನ್ನು ತೋರಿಸುತ್ತಾರೆ" ಎಂದಿದ್ದಾರೆ.