ಬೆಂಗಳೂರು, ಜ 15 (DaijiworldNews/HR): ನಮ್ಮ ವಿರುದ್ಧ ಮಾತ್ರ ಅಧಿಕಾರಿಗಳು ಕೇಸ್ ದಾಖಲಿಸುತ್ತಿದ್ದು, ಬಿಜೆಪಿ ನಾಯಕರ ವಿರುದ್ಧ ಯಾವುದೇ ಕೇಸ್ ಹಾಕುತ್ತಿಲ್ಲ. ನಮಗೂ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡುವ ಒಂದು ಕಾಲ ಬರುತ್ತೆ ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನನ್ನ ವಿರುದ್ಧ ಯಾವೆಲ್ಲ ಪ್ರಯೋಗ ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿದ್ದಾರೆ. ನನ್ನ ಮಗಳು ನಡೆಸುತ್ತಿರುವ ಶಾಲೆಯ ಮೇಲೂ ಕೇಸ್ ಹಾಕಿದ್ದಾರೆ. ಯಾವುದೋ ಹಳೆ ಹಳೆ ಕೇಸ್ ಗಳನ್ನು ಓಪನ್ ಮಾಡುತ್ತಿದ್ದಾರೆ. ಏನೇನು ತೊಂದರೆ ಕೊಡಬೇಕು ಅದೆಲ್ಲವನ್ನೂ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಅಧಿಕಾರಿಗಳು ನಮ್ಮ ವಿರುದ್ಧ ಮಾತ್ರ ಕೇಸ್ ಹಾಕುತ್ತಿದ್ದು, ಬಿಜೆಪಿ ನಾಯಕರ ವಿರುದ್ಧ ಹಾಕುತ್ತಿಲ್ಲ. ಈ ಬಗ್ಗೆಯೂ ಕೋರ್ಟ್ ನಲ್ಲಿ ಹೋರಾಡುತ್ತೇವೆ. ಸರ್ಕಾರ ಈಗಲೇ ಎಚ್ಚೆತ್ತು ಎಲ್ಲರನ್ನು ಸಮಾನವಾಗಿ ನೋಡದೇ ಹೋದರೆ ಸರಿಯಿರಲ್ಲ. ಮುಂದೆ ನಮಗೂ ಕಾಲ ಬರುತ್ತೆ. ಆಗ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಬೇಕಾಗುತ್ತೆ ಎಂದಿದ್ದಾರೆ.