ಮುಂಬೈ, ಜ 15 (DaijiworldNews/PY): ಬಾಲಿವುಡ್ ನಟ ಸಲ್ಮಾನ್ ಖಾನ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಮುಂಬೈ ಸಿಟಿ ಸಿವಿಲ್ ಕೋರ್ಟ್ ವಜಾ ಮಾಡಿದೆ.
ಮುಂಬೈನ ಪನ್ವೇಲ್ ಪ್ರದೇಶದಲ್ಲಿ ಸಲ್ಮಾನ್ ಖಾನ್ ಫಾರ್ಮ್ಹೌಸ್ನ ಪಕ್ಕದ ಸ್ಥಳದಲ್ಲಿ ಖೇತನ್ ಕಕ್ಕಡ್ ಎನ್ನುವ ವ್ಯಕ್ತಿಯಿಂದ ಜಮೀನಿ ಖರೀದಿಸಿದ್ದರು.
ಆದರೆ, ಯೂಟ್ಯೂಬ್ ಚಾನೆಲ್ಗೆ ಖೇತನ್ ಕಕ್ಕಡ್ ನೀಡಿದ್ದ ಸಂದರ್ಶನದಲ್ಲಿ ತಮ್ಮ ಕುರಿತು ಹಾಗೂ ಫಾರ್ಮ್ಹೌಸ್ ಬಗ್ಗೆ ನೀಡಿರುವ ವಿವಾದಾಸ್ಪದ ಹೇಳಿಕೆಗಳು ತಮ್ಮ ಮಾನಹಾನಿಯಾಗುವ ರೀತಿಯಲ್ಲಿದೆ ಎಂದು ಆರೋಪಿಸಿ ಮುಂಬೈ ಸಿಟಿ ಸಿವಿಲ್ ಕೋರ್ಟ್ನಲ್ಲಿ ಸಲ್ಮಾನ್ ಖಾನ್ ಮಾನಹಾನಿ ಮೊಕದ್ದಮೆ ಹೂಡಿದ್ದರು.
ಸಲ್ಮಾನ್ ಖಾನ್ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳದ ನ್ಯಾಯಾಲಯ ವಜಾಗೊಳಿಸಿದೆ. ಮುಂದಿನ ವಿಚಾರಣೆಯನ್ನು ಮೇ.21ಕ್ಕೆ ಮುಂದೂಡಿ ನ್ಯಾಯಾಧೀಶ ಅನಿಲ್ ಹೆಚ್ ಲಡ್ಡಾಡ್ ಆದೇಶಿಸಿದ್ದಾರೆ.