ಬಿಹಾರ, ಜ 15 (DaijiworldNews/MS): ನಳಂದಾದಲ್ಲಿ ವಿಷಪೂರಿತ ಮದ್ಯ ಸೇವಿಸಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಶನಿವಾರ ಈ ಘಟನೆ ನಡೆದಿದ್ದು, ಮದ್ಯ ಸೇವನೆ ಮಾಡಿದ ಬಳಿಕ ಇವರೆಲ್ಲರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು ಎಂದು ತಿಳಿದುಬಂದಿದೆ.
ಸೊಹ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟಿ ಪಹಾಡಿ ಮತ್ತು ಪಹಾಡ್ ತಲ್ಲಿ ಎಂಬ ಗ್ರಾಮಗಳಲ್ಲಿ ಘಟನೆ ನಡೆದಿದ್ದು, ಐವರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಛೋಟಿ ಪಹಾಡಿ ಇಬ್ಬರು ಸಾವನ್ನಪ್ಪಿದ್ದರೆ, ಪಹಾಡ್ ತಲ್ಲಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಮೃತರ ಕುಟುಂಬದ ಸದಸ್ಯರು ಹೇಳಿದ್ದಾರೆ.
ಈ ನಡುವೆ ಛೋಟಿ ಪಹಾಡಿ ಮತ್ತು ಪಹಾಡ್ತಲ್ಲಿ ಪ್ರದೇಶಗಳಿಗೆ ಆಗಮಿಸಿದ ಡಿಎಸ್ಪಿ ಮತ್ತು ಎಸ್ಎಚ್ಒ ತನಿಖೆ ಆರಂಭಿಸಿದ್ದಾರೆ