ಲಖನೌ, ಜ 15 (DaijiworldNews/PY): "ಬಿಜೆಪಿಯ ಒಂದೊಂದೇ ವಿಕೆಟ್ ಪತನವಾಗುತ್ತಿವೆ. ಬಾಬಾ ಸಿಎಂಗೆ ಕ್ರಿಕೆಟ್ ಆಡಲು ಬರುವುದಿಲ್ಲ. ಗೊತ್ತಿದ್ದರೂ ಕ್ಯಾಚ್ ಕೈಚೆಲ್ಲುತ್ತಿದ್ದಾರೆ" ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಮಾಡಿರುವ 80 ವರ್ಸಸ್ 20 ಸ್ಪರ್ಧೆ ಹೇಳಿಕೆಗೆ ತಿರುಗೇಟು ನೀಡಿರುವ ಅವರು, "ಆದಿತ್ಯನಾಥ್ ಗಣಿತ ಶಿಕ್ಷಕರಾಗಬೇಕು" ಎಂದಿದ್ದಾರೆ.
"ಸ್ವಾಮಿ ಪ್ರಸಾದ್ ಮೌರ್ಯ ಸೇರಿ ಇತರೆ ನಾಯಕರ ಸೇರ್ಪಡೆಯೊಂದಿಗೆ ಬಿಜೆಪಿ ಈಗ ಉಳಿದಿರುವ ಶೇ.20 ಕೂಡಾ ಕಳೆದುಕೊಳ್ಳಲಿದೆ. ಸಂಪೂರ್ಣವಾಗಿ ಬಾಬಾ ಸಿಎಂ ವೈಫಲ್ಯ ಕಂಡಿದ್ದಾರೆ. ದೆಹಲಿಯಿಂದ ಯಾರೇ ಬಂದರೂ ಪರೀಕ್ಷೆಯಲ್ಲಿ ಅವರು ತೇರ್ಗಡೆ ಹೊಂದುವುದಿಲ್ಲ" ಎಂದು ಹೇಳಿದ್ದಾರೆ.
ಹಿಂದುಳಿದ ವರ್ಗಗಳ ನಾಯಕರಾದ ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ ಹಾಗೂ ಇನ್ನೂ ಐವರು ಬಿಜೆಪಿ ಶಾಸಕರು ಬಿಜೆಪಿಗೆ ರಾಜೀನಾಮೆ ನೀಡಿದ್ದು, ಸಮಾಜವಾದಿ ಪಕ್ಷ ಸೇರಿದ್ದಾರೆ.