ಚೆನ್ನೈ, ಜ 15 (DaijiworldNews/PY): ತಮಿಳುನಾಡಿನ ಆವನಿಯಪುರಂ ಪ್ರದೇಶದಲ್ಲಿ ಪೊಂಗಲ್ ಹಬ್ಬದ ಪ್ರಯುಕ್ತ ನಡೆಯುವ ಜಲ್ಲಿಕಟ್ಟು ಗ್ರಾಮೀಣ ಕ್ರೀಡೆಯಲ್ಲಿ ಓರ್ವ ಸಾವನ್ನಪ್ಪಿ, 80 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮೃತರನ್ನು ಬಾಲಮುರುಗನ್ (18) ಎಂದು ಗುರುತಿಸಲಾಗಿದೆ.
ಗಾಯಗೊಂಡವರ ಪೈಕಿ 38 ಗೂಳಿ ಪಳಗಿಸುವ ಸ್ಪರ್ಧಿಗಳು, 24 ಗೂಳಿ ಮಾಲೀಕರು ಹಾಗೂ 18 ಪ್ರೇಕ್ಷಕರು ಸೇರಿದ್ದಾರೆ.
ಪೊಂಗಲ್ ಹಬ್ಬದ ಪ್ರಯುಕ್ತ ತಮಿಳುನಾಡಿನಲ್ಲಿ ಗೂಳಿ ಪಳಗಿಸುವ ಸಾಂಪ್ರದಾಯಿಕ ಜಲ್ಲಿಕಟ್ಟು ಗ್ರಾಮೀಣ ಕ್ರೀಡೆ ನಡೆಯುತ್ತದೆ. ಇದರ ಮೂಲಕ ಹೊಸ ವರ್ಷವನ್ನು ಬರ ಮಾಡಿಕೊಳ್ಳಲಾಗುತ್ತದೆ.