ಜಲಂಧರ್, ಜ 14 (DaijiworldNews/HR): ಐದು ದಶಕಗಳ ಕಾಲದ ಸಂಬಂಧವನ್ನು ಮುರಿದುಕೊಂಡು ಪಂಜಾಬ್ನ ಮಾಜಿ ಸಚಿವ ಮತ್ತು ಫಗ್ವಾರಾದಲ್ಲಿ ಪಕ್ಷದ ಪರಿಶಿಷ್ಟ ಜಾತಿ ನಾಯಕ ಜೋಗಿಂದರ್ ಸಿಂಗ್ ಮಾನ್ ಅವರು ಕಾಂಗ್ರೆಸ್ಗೆ ಮತ್ತು ಪಂಜಾಬ್ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್ನ(ಕ್ಯಾಬಿನೆಟ್ ಶ್ರೇಣಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜೋಗಿಂದರ್ ಸಿಂಗ್ ಮಾನ್ ಅವರು ಬಿಯಾಂತ್ ಸಿಂಗ್, ಎಚ್ಎಸ್ ಬ್ರಾರ್, ರಾಜಿಂದರ್ ಕೌರ್ ಭಟ್ಟಾಲ್ ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸಂಪುಟದಲ್ಲಿ ಸಚಿವರಾಗಿದ್ದು, ಫಗ್ವಾರದಿಂದ ಮೂರು ಬಾರಿ ಶಾಸಕರಾಗಿದ್ದರು.
ಇನ್ನು ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ, 'ನಾನು ಸತ್ತಾಗ ಕಾಂಗ್ರೆಸ್ ತ್ರಿವರ್ಣ ಧ್ವಜವನ್ನು ನನ್ನ ದೇಹಕ್ಕೆ ಸುತ್ತಿಕೊಳ್ಳಬಹುದು ಎಂದು ನಾನು ಕನಸು ಕಂಡಿದ್ದೆ ಆದರೆ ಪೋಸ್ಟ್- ಮೆಟ್ರಿಕ್ ವಿದ್ಯಾರ್ಥಿವೇತನ ಹಗರಣದಲ್ಲಿ ಕಾಂಗ್ರೆಸ್ ತಪ್ಪಿತಸ್ಥ ಎಂದಾಗ ನನ್ನ ಆತ್ಮಸಾಕ್ಷಿಯು ನನ್ನನ್ನು ಇಲ್ಲಿ ಉಳಿಯಲು ಬಿಡುವುದಿಲ್ಲ ಎಂದಿದ್ದಾರೆ.