ವಯನಾಡ್, ಜ 14 (DaijiworldNews/AN): ಮಲಯಾಳಂ ಸಿನಿಮಾ ನಿರ್ದೇಶಕ ಅಲಿ ಅಕ್ಬರ್ ತನ್ನ ಪತ್ನಿಯೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು 'ರಾಮಸಿಂಹನ್' ಎಂದು ಬದಲಾಯಿಸಿರುವುದಾಗಿ ತಿಳಿಸಿದ್ದಾರೆ.
ಅಲಿ ಅಕ್ಬರ್ ತನ್ನ ಪತ್ನಿಯೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ ವಿಚಾರವನ್ನು ಅಂತರಾಷ್ಟ್ರೀಯ ಹಿಂದೂ ಪರಿಷತ್ತಿನ ಮಾಜಿ ನಾಯಕ ಮತ್ತು ಹಿಂದೂ ಸೇವಾ ಕೇಂದ್ರದ ಮುಖಂಡ ಪ್ರತೀಶ್ ವಿಶ್ವನಾಥ್ ಅವರು ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದು, ನಿರ್ದೇಶಕರು ಈಗ ಅಧಿಕೃತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ಅಲಿ ಅಕ್ಬರ್ ಈಗ ರಾಮಸಿಂಹನ್ ಎಂದು ತಿಳಿಸಿದ್ದಾರೆ.
ವಿಮಾನ ಅಪಘಾತದಲ್ಲಿ ಮೃತಪಟ್ಟ ಮಿಲಿಟರಿ ಅಧಿಕಾರಿ ಬಿಪಿನ್ ರಾವತ್ ಅವರ ಸಾವನ್ನ ಕೆಲವು ಮುಸ್ಲಿಮರು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಿದ್ದನ್ನು ಖಂಡಿಸಿ ಅಲಿ ಅಕ್ಬರ್ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಇನ್ನು ಬಿಪಿನ್ ರಾವತ್ ಅವರ ಸಾವಿಗೆ ಅಗೌರವ ಸೂಚಿಸಿದ ದೇಶ ವಿರೋಧಿ ಮುಸ್ಲಿಮರ ಕೃತ್ಯವನ್ನು ಯಾವುದೇ ಮುಸ್ಲಿಂ ನಾಯಕರೂ ಖಂಡಿಸಿಲ್ಲ. ಹಾಗಾಗಿ ಈ ಧರ್ಮದ ಬಗ್ಗೆ ತಮಗೆ ನಂಬಿಕೆ ಉಳಿದಿಲ್ಲ ಎಂದು ಅಲಿ ಅಕ್ಬರ್ ಹೇಳಿದ್ದರು.